ಮುಹಮ್ಮದ್ ಇಕ್ಬಾಲ್ ಫೈಝಿ
Update: 2025-05-09 21:09 IST
ಮಂಗಳೂರು: ಕಿನ್ಯ ಪಡ್ಪು ನಿವಾಸಿ, ಮುಹಮ್ಮದ್ ಇಕ್ಬಾಲ್ ಫೈಝಿ ಹೃದಯಾಘಾತದಿಂದ ಕುವೈತ್‌ನ ಹವಲ್ಲಿಯಲ್ಲಿ ನಿಧನರಾದರು.
ಸಮಸ್ತ ಅಧೀನದ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಕುವೈತ್ ಇಸ್ಲಾಮಿಕ್ ಕೌನ್ಸಿಲ್ ಕೇಂದ್ರ ಸಮಿತಿಯ ಉಪಾಧ್ಯಕ್ಷ, ಹವಲ್ಲಿ ವಲಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತದೇಹವು ರಾತ್ರಿ ಸುಮಾರು ಮೂರು ಘಂಟೆಗೆ ಊರಿಗೆ ತಲುಪಲಿದ್ದು, ಮುಂಜಾನೆ ಕಿನ್ಯ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಮೃತರು ಪತ್ನಿ, ಮೂವರು ಹೆಣ್ಣು, ಓರ್ವ ಗಂಡು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.