×
Ad

ರಸ್ತೆ ಪಕ್ಕದ ಕಲ್ಲಿಗೆ ಢಿಕ್ಕಿ‌ ಹೊಡೆದು ಹೊತ್ತಿ ಉರಿದ ಬೈಕ್

Update: 2025-05-11 20:26 IST

ಪಡುಬಿದ್ರಿ: ಯುವಕನೊರ್ವನ ನಿಯಂತ್ರಣ ತಪ್ಪಿದ ಬೈಕ್ಕೊಂದು ರಸ್ತೆ ಪಕ್ಕದ ಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ಗೆ ಬೆಂಕಿ ಹೊತ್ತಿ ಸಂಪೂರ್ಣ ಕರಕಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಗರೋಡಿ ಸಮೀಪ ಈ ಘಟನೆ ನಡೆದಿದ್ದು, ಎರ್ಮಾಳು ಗುಜ್ಜಿ ನಿವಾಸಿ ಸೈಫಾನ್ ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಪಡುಬಿದ್ರಿ ಕಡೆಯಿಂದ ಎರ್ಮಾಳಿನ ತನ್ನ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕಲ್ಲಿಗೆ ಢಿಕ್ಕಿ ಹೊಡೆಯಿತು. ಬೈಕ್ ಢಿಕ್ಕಿ ಹೊಡೆದ ಕೂಡಲೇ ಬೈಕ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು. ಗಾಯಳುವನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News