×
Ad

ನೆಲ್ಯಾಡಿಯಲ್ಲಿ ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಸೆರೆ

Update: 2025-05-11 22:06 IST

ಹರಿಪ್ರಸಾದ್

ಉಪ್ಪಿನಂಗಡಿ : ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಶರತ್ ಕುಮಾರ್ (34) ಎಂಬಾತನನ್ನು ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹರಿಪ್ರಸಾದ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ ಕೊಲೆ ಕೃತ್ಯ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಚಿಕ್ಕಪ್ಪನ ಮನೆಮಂದಿ ಯೊಂದಿಗೆ ಸಂಘರ್ಷನಿರತನಾಗಿದ್ದ ಶರತ್ ಕುಮಾರ್ ನನ್ನು ಆತನ ಚಿಕ್ಕಪ್ಪನ ಮನೆಯಂಗಳದಲ್ಲಿಯೇ ಹೊಡೆದು ಕೊಲ್ಲಲಾಗಿತ್ತು.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೆರಿಯಶಾಂತಿಯಲ್ಲಿದ್ದ ಆರೋಪಿ ಹರಿಪ್ರಸಾದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News