×
Ad

ಎಸ್ಸೆಸ್ಸೆಫ್: ಮಾದಕ ವಸ್ತುಗಳ ವಿರುದ್ಧದ ಅಭಿಯಾನಕ್ಕೆ ಚಾಲನೆ

Update: 2025-05-12 18:47 IST

ಮಂಗಳೂರು, ಮೇ 12: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ಧ ಐವತ್ತೈದು ದಿನಗಳ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಕೋಶಾಧಿಕಾರಿ ಇರ್ಷಾದ್ ಹಾಜಿ ಗೂಡಿನ ಬಳಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಯುವಜನತೆಯ ಭವಿಷ್ಯವನ್ನು ಕೊಲ್ಲುತ್ತಿರುವ ಡ್ರಗ್ಸ್ ಮನುಕುಲಕ್ಕೆ ಮಾರಕವಾಗಿ ಪರಿಣಮಿಸು ತ್ತಿದ್ದು ಬಹಳಷ್ಟು ಅಪರಾಧಗಳಿಗೆ ಇದು ಕಾರಣವಾಗಿದೆ. ಈ ನಿಟ್ಟಿನಲ್ಲಿ ’ಡ್ರಗ್ಸ್ ಮನುಕುಲಕ್ಕೆ ಮಾರಕ’ ಎಂಬ ಘೋಷಣೆಯೊಂದಿಗೆ ಎಸ್ಸೆಸ್ಸೆಫ್ ಎರಡು ತಿಂಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಈ ಪ್ರಯುಕ್ತ ಮನೆಮನೆ ಭೇಟಿ, ಕ್ಯಾಂಪಸ್‌ಗಳಲ್ಲಿ ಜಾಗೃತಿ ಅಭಿಯಾನ, ಬೀದಿ ಭಾಷಣ, ಕಟ್ಟೆ ಹರಟೆ, ಡಾಕ್ಯುಮೆಂಟರಿ ಪ್ರದರ್ಶನ, ಡಿಸಿ ಮಾರ್ಚ್, ವಿದ್ಯಾರ್ಥಿ ವಾಕಥಾನ್ ಹಾಗೂ ಇನ್ನಿತರ ಬಹಳಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಜೂನ್ 26ರಂದು ಈ ಅಭಿಯಾನ ಸಮಾರೋಪಗೊಳ್ಳಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News