×
Ad

ಹಕ್ಕು, ಸವಲತ್ತುಗಳಿಗೆ ವಿಕಲಚೇತನರಿಂದ ಸಂಘಟಿತ ಹೋರಾಟ ಅಗತ್ಯ: ರಂಗಪ್ಪದಾಸರ್

Update: 2025-05-12 20:59 IST

ಮಂಗಳೂರು, ಮೇ 12: ವಿಕಲಚೇತನರು ಸಮಾಜದ ಅಂಗವಾಗಿದ್ದಾರೆ. ತಮ್ಮ ಹಕ್ಕುಗಳು ಮತ್ತು ಸವಲತ್ತುಗಳನ್ನು ಪಡೆಯಲು ವಿಕಲಚೇತನರು ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ವಿಶಿಷ್ಟ ಚೇತನರ ಮತ್ತು ಪಾಲಕರ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ರಂಗಪ್ಪದಾಸರ್ ಹೇಳಿದ್ದಾರೆ.

ವಿಶಿಷ್ಟ ಚೇತನರ ಸಂಘ (ರಿ) ದ.ಕ. ಜಿಲ್ಲೆ ಮತ್ತು ವಿಶೇಷ ಚೇತನರ ಪೋಷಕರ ಸಂಘದ ಆಶ್ರಯದಲ್ಲಿ ಸೋಮವಾರ ನಗರದ ಡಿ. ಗ್ರೂಪ್ ಸಭಾಂಗಣದಲ್ಲಿ ಅಂಗವಿಕಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ನಡೆದ ‘ಅಂಗವಿಕಲರು ಮತ್ತು ಪೋಷಕರ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿಕಚೇತನರ ಬದುಕು ದಿನೇದಿನೇ ದುಸ್ತರವಾಗುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿಕಲಚೇತನರಿಗೆ ದೊರೆಯುವ ಸವಲತ್ತುಗಳು ಕಡಿಮೆ ಇದೆ ಎಂದರು.

ವಿಕಲಚೇತನರಿಗೆ ಪಿಂಚಣಿ ಹೆಚ್ಚಳ, ವಸತಿ, ಪೋಷಣೆ ಭತ್ಯೆ, 2016ರ ದಿವ್ಯಾಂಗರ ಅಧಿನಿಯಮ ಕರ್ನಾಟಕ ದಲ್ಲಿ ಜಾರಿಗೊಳಿಸುವುದು ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ನೇ 21ರಂದು ಹೋರಾಟ ನಡೆಯಲಿದ್ದು, ವಿಕಲಚೇತನರು ಮತ್ತು ಪಾಲಕರು ಭಾಗವಹಿಸಬೇಕೆಂದು ಕರೆ ನೀಡಿದರು.

ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರವೀಂದ್ರನಾಥ ಉಚ್ಚಿಲ ಮುಖ್ಯ ಅತಿಥಿಯಾಗಿ ವಿಕಲಚೇತನರಲ್ಲಿ ಕೀಳರಿಮೆ ಇರಬಾರದು. ಒಗ್ಗಟ್ಟಾದರೆ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.

ಸಮಿತಿಯ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಸದಸ್ಯ ಅರ್ಪುದ ರಾಜನ್, ಸಘದ ಪ್ರಮುಖರಾದ ಅಸುಂತ ಡಿ ಸೋಜ, ಯೋಗೀಶ್, , ಅನುಸೂಯ , ಅಜಿತಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News