×
Ad

ಉಳ್ಳಾಲ: ಹಿಫ್ಲುಲ್ ಕುರ್ ಆನ್ ವಿದ್ಯಾರ್ಥಿಗಳ ಕಾರ್ಯಕ್ರಮ

Update: 2025-05-12 22:22 IST

ಉಳ್ಳಾಲ: ಇಲ್ಲಿನ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಒಂದು ವರ್ಷ ದಲ್ಲಿ ಬದಲಾವಣೆ ಆಗುತ್ತಾರೆ. ಹಿಪ್ಲುಲ್ ಕುರ್ ಆನ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಧಾರ್ಮಿಕ ಗುರು, ಪೈಲಟ್ ಆದವರು ಇದ್ದಾರೆ. ಶಿಕ್ಷಣದಲ್ಲಿ ಉಳ್ಳಾಲ ಕ್ರಾಂತಿ ಯನ್ನು ಸೃಷ್ಟಿಸಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹೇಳಿದರು.

ಅವರು ಸೋಮವಾರ ಉಳ್ಳಾಲ ದರ್ಗಾ ವಠಾರದಲ್ಲಿ ಉರೂಸ್ ಪ್ರಯುಕ್ತ ನಡೆದ ಹಿಫ್ಲುಲ್ ಕುರ್ ಆನ್ ವಿದ್ಯಾರ್ಥಿಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ.ನೌಮಾನ್ ನೂರಾನಿ ಕಾರ್ಯಕ್ರಮ ಉದ್ಘಾಟಿಸಿದರು.

ಸ್ಮಾರ್ಟ್ ಕ್ಲಾಸ್ ಉದ್ಘಾಟನೆ: ದರ್ಗಾ ಉರೂಸ್ ಪ್ರಯುಕ್ತ ಸಯ್ಯಿದ್ ಮದನಿ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಇಲೈಟ್ ಮೀಟ್ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಸಿಪ್ರಿಯನ್ ಮೊಂತೆರೋ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಇಸಾಕ್ ಮೇಲಂಗಡಿ ,ಅಬ್ಬಾಸ್ ಕೋಟೆಪುರ,ಅಬ್ದುಲ್ ಖಾದರ್ ಕೋಡಿ, ಸಾಜಿದ್ ಉಳ್ಳಾಲ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ಕಾರ್ಯದರ್ಶಿ ಬಶೀರ್ ಸಖಾಫಿ,ಪ್ರೊ. ನಜೀಬ್ ನೂರಾನಿ, ಪ್ರೊ.ತಸ್ಲೀಮ್ ನೂರಾನಿ, ಸಿನಾನ್ ಮದನಿ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ , ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ , ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ , ಅಕ್ಷರ ದಾಸೋಹದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ , ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಫಾಝಿಲ್ ಮತ್ತು ಜಬ್ಬಾರ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹುಸೇನ್ , ಜೊತೆ ಕಾರ್ಯದರ್ಶಿ ಅಝೀಝ್ ಕೋಡಿ , ಚಾರಿಟೇಬಲ್ ಟ್ರಸ್ಟ್ ನ ಶಿಕ್ಷಣ ಸಂಯೋಜಕ ಎಂ.ಎಚ್. ಮಲಾರ್, ಕಣಚೂರ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಯು ಟಿ ಇಕ್ಬಾಲ್, ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು. ಜಮಾಲ್ ನೂರಾನಿ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News