ಉಳ್ಳಾಲ: ಯೋಧರ ಸುರಕ್ಷತೆಗಾಗಿ ಪ್ರಾರ್ಥನೆ ಕಾರ್ಯಕ್ರಮ
ಉಳ್ಳಾಲ : ಯುದ್ಧ ದಿಂದ ಬಹಳಷ್ಟು ಕುಟುಂಬ ಅನಾಥ ಆಗುತ್ತದೆ. ಸಂಕಷ್ಟ ಎದುರಾಗುತ್ತದೆ. ಆದರೆ ಅನಿವಾರ್ಯ ಬಂದಾಗ ಯುದ್ಧ ನಡೆಯುತ್ತದೆ ಎಂದು ರಾಜ್ಯ ಎಸ್ ವೈ ಎಸ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಹೇಳಿದರು
ಅವರು ದೇಶ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಸುರಕ್ಷತೆ ದೃಷ್ಟಿಯಿಂದ ಉಳ್ಳಾಲ ದರ್ಗಾ ಸಮಿತಿ ಹಮ್ಮಿಕೊಂಡಿದ್ದ ದುಆ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಹಲ್ಗಾಮ್ ಘಟನೆ ಸಂಘರ್ಷಕ್ಕೆ ಮೂಲ ಕಾರಣ ಆಗಿದೆ. ಪಾಕ್ ಮತ್ತು ಭಾರತ ಸೌಹಾರ್ದತೆಯ ಬದುಕು ಸಾಧಿಸಬೇಕಾಗಿದೆ. ಆದರೆ ತದ್ವಿರುದ್ಧ ರೀತಿಯಲ್ಲಿ ಭಾರತ- ಪಾಕ್ ಸಂಬಂಧ ನಡೆಯುತ್ತಿದೆ ಎಂದರು.
ಪಾಕ್ ನಲ್ಲಿದ್ದು ನಮ್ಮ ದೇಶದ ಮೇಲೆ ದಾಳಿ ಮಾಡುವ ಭಯೋತ್ಪಾದಕರು ಇದ್ದಾರೆ. ಅವರನ್ನು ಮಟ್ಟ ಹಾಕುವ ಕೆಲಸ ಆಗಬೇಕು. ಭಾರತದ ಮುಸ್ಲಿಮರು ಯಾವ ಕಾರಣಕ್ಕೂ ಪಾಕಿಸ್ತಾನ ವನ್ನು ಬೆಂಬಲಿಸಲು ಸಾಧ್ಯ ಇಲ್ಲ. ಬೆಂಬಲಿಸಲು ಇಸ್ಲಾಮಿನಲ್ಲಿ ಅವಕಾಶ ಇಲ್ಲ ಎಂದರು.
ದೇಶ ಪ್ರೇಮ ನಮ್ಮಲ್ಲಿ ಇರಬೇಕು. ನಾವು ಹುಟ್ಟಿದ ದೇಶವನ್ನು ಗೌರವಿಸುವುದು ನಮ್ಮ ಕರ್ತವ್ಯ. ನಾವು ಯಾವತ್ತೂ ಯುದ್ಧ ಕೈ ಹೋಗುವುದಿಲ್ಲ. ನಾವು ಶಾಂತಿಗೆ ಬುದ್ಧ. ಅಗತ್ಯ ಬಂದರೆ ಸಂಘರ್ಷಕ್ಕೆ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರೊ. ನೌಮಾನ್ ನೂರಾನಿ ದುಆ ನೆರವೇರಿಸಿ ಯೋಧರ ಅವಶ್ಯಕತೆ ಹಾಗೂ ಅವರ ಸುರಕ್ಷತೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ವಿಷಯ ಮಂಡಿಸಿ ಮಾತನಾಡಿ, ಇಂದು ನಮ್ಮ ದೇಶ ಯುದ್ಧದ ಕಾರ್ಮೋಡ ದಲ್ಲಿದೆ. ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಅವರ ಮತ್ತು ದೇಶದ ಭದ್ರತೆಗೆ ದಕ್ಕೆ ಬಂದಾಗ ನಾವು ಒಟ್ಟಾಗಿದ್ದೇವೆ. ಸರ್ಕಾರದ ಜೊತೆ ಕೈಜೋಡಿಸುತ್ತೇವೆ. ಯೋಧರ ಸುರಕ್ಷತೆಗೆ ನಾವು ಐದು ಬಾರಿ ಪ್ರಾರ್ಥನೆಯಲ್ಲಿ ದುಆ ಮಾಡಬೇಕು ಎಂದು ಕರೆ ನೀಡಿದರು.
ರಾತ್ರಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ದಲ್ಲಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಿರಾಜುದ್ದೀನ್ ಸಖಾಫಿ ಪತ್ತನಾಪುರಮ್ ಮಾತನಾಡಿದರು. ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ದುಆ ನೆರವೇರಿಸಿದರು.
ಕಾರ್ಯಕ್ರಮ ದಲ್ಲಿ ಆಝಾದ್ ನಗರ ಮಸೀದಿ ಅಧ್ಯಕ್ಷ ಮುಹಮ್ಮದ್, ಖತೀಬ್ ಅಬ್ದುಲ್ ಸಮದ್ ಅಹ್ಸನಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿ ಕಾರಿ ನಾಝೀಮ್ ಮುಕಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊ. ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ , ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ , ಯು.ಕೆ.ಯೂಸುಫ್ ಉಳ್ಳಾಲ, ಅಶ್ರಫ್ ಹಾಜಿ ಕೋಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ಸಾಜಿದ್ ಉಳ್ಳಾಲ, ಅಬ್ಬಾಸ್ ಕೋಟೆಪುರ, ಕೆಎಂಕೆ ಮಂಜನಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.