×
Ad

ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್: ಪ್ರಥಮ ಉರೂಸ್ ಸ್ವಾಗತ ಸಮಿತಿ ರಚನೆ

Update: 2025-05-13 21:38 IST

ಪುತ್ತೂರು: ಕಡಬ ತಾಲೂಕಿನ ಸವಣೂರು ಸಮೀಪದ ಕೂರ ಎಂಬಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ದ.ಕ. ಜಿಲ್ಲಾ ಸಂಯುಕ್ತ ಖಾಝಿ ಹಾಗೂ ಕೇಂದ್ರ ಮುಶಾವರ ಸದಸ್ಯರಾಗಿದ್ದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ದರ್ಗಾದ ಪ್ರಥಮ ಉರೂಸ್ ಮುಬಾರಕ್ ಕಾರ್ಯಕ್ರಮವು ಜೂನ್ 26ರಿಂದ 29 ತನಕ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಊರೂಸ್ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಕೂರತ್ ದರ್ಗಾದ ವಠಾರದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಪುತ್ರ ಸಯ್ಯದ್ ಅಬ್ದರ‍್ರಹ್ಮಾನ್ ಮಶ್ಹೂದ್ ತಂಙಳ್ ವಹಿಸಿದ್ದರು. ಅಸ್ಸಯ್ಯದ್ ಸಾದಾತ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಿದರು. ಯೇನೆಪೋಯ ಮುಹಮ್ಮದ್ ಕುಂಞಿ ಹಾಜಿ, ಯು ಟಿ ಇಫ್ತಿಕಾರ್, ವಳವೂರು ಸಅದಿ, ಜಿ ಎಂ ಉಸ್ತಾದ್, ಕೆ ಎಂ ಸಿದ್ದೀಕ್ ಮೋಂಟುಗೋಳಿ, ಗುಲಾಮ್ ಅಹ್ಮದ್ ಹಾಜಿ, ರಜಬ್ ಸಾಹಿಬ್ ಸುಫ್ಯಾನ್ ಸಖಾಫಿ, ಬಿ ಎಸ್ ಮುಹಮ್ಮದ್ ಫೈಝಿ, ಖೈರುಲ್ಲಾಹ್, ರಫೀಕ್ ಅಮಾನಿ ಕಣ್ಣೂರು, ಅಬೂಬಕರ್ ಕೂರತ್ ಮಾತನಾಡಿದರು.

ಬಳಿಕ ಉರೂಸ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೆ ಎಸ್ ಆಟ್ಟಕೋಯ ತಂಙಳ್ ಕುಂಬೋಳ್, ಕಾರ್ಯಾಧ್ಯಕ್ಷರಾಗಿ ಅಬೂಬಕ್ಕರ್ ಕೂರತ್, ಪ್ರಧಾನ ಸಂಚಾಲಕರಾಗಿ ಯು.ಟಿ. ಇಫ್ತಿಕಾರ್, ಕಾರ್ಯಕಾರಿ ಸಂಚಾಲಕರಾಗಿ ಖಾಲಿದ್ ಹಾಜಿ, ಸದಸ್ಯರಾಗಿ ಸಯ್ಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಯ್ಲಾಂಡಿ, ಇಸ್ಮಾಯಿಲ್ ತಂಙಳ್ ಉಜಿರೆ, ಸಾದಾತ್ ತಂಙಳ್, ಶಾಫಿ ತಂಙಳ್ ವಳಪಟ್ಟಣಂ, ಎಣ್ಮೂರು ತಂಙಳ್, ಮಶ್ಹೂದ್ ತಂಙಳ್ ಕೂರತ್, ಶರಫುದ್ದೀನ್ ತಂಙಳ್ ದೇರಳಕಟ್ಟೆ, ಚಟ್ಟಕ್ಕಲ್ ತಂಙಳ್, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು, ಹಮೀದ್ ಹಾಜಿ ಬೈತಡ್ಕ, ಇಬ್ರಾಹಿಂ ಪಟ್ಟಾಡಿ, ಖೈರುಲ್ಲಾಹ್, ಕೆ.ಎಂ. ಮುಸ್ತಫ ಸುಳ್ಯ, ಬಾದುಷಾ ಸಖಾಫಿ, ಉಮರ್ ಸಖಾಫಿ ತಲಕ್ಕಿ, ಗುಲಾಮ್ ಹಾಜಿ ಉಡುಪಿ, ಯೂಸುಫ್ ಗೌಸಿಯಾ, ಅಲಿ ಫೈಝಿ ಬಾಳೆಪುಣಿ, ಮಿಸ್ ಹಬ್ ತಂಙಳ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಲ್ಯಾಸ್ ಅಮ್ಜದಿ ಕೂರತ್, ಸುಫ್ಯಾನ್ ಸಖಾಫಿ, ನೌಫಳ್ ಸಖಾಫಿ ಕಳಸ, ನವಾಝ್ ಸಖಾಫಿ ಬೆಳಂದೂರು, ಅಶ್ರಫ್ ಕಿನಾರ, ಸಿರಾಜ್ ಇರುವೇರಿ, ನಾಝಿಮ್ ಹಾಜಿ ಉಳ್ಳಾಲ, ಝಕರಿಯ್ಯಾ ಗೋವಾ ಇನ್ನಿತರನ್ನು ಆಯ್ಕೆ ಮಾಡಲಾಯಿತು.

ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿದರು. ಕೂರತ್ ಮುರ‍್ರಿಸ್ ಅಬ್ದುಲ್ ಖಾದರ್ ಫಾಳಿಲಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News