×
Ad

ಅಧಿಕ ಲಾಭಾಂಶದ ಆಮಿಷ : ವಂಚನೆಗೊಳಗಾದ ಮಹಿಳೆಯಿಂದ ದೂರು

Update: 2025-05-13 21:55 IST

ಮಂಗಳೂರು, ಮೇ 13: ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಪಡೆಯಬಹುದು ಎಂಬ ಆಮಿಷಕ್ಕೆ ಮಹಿಳೆಯೊಬ್ಬರು 37.79 ಲಕ್ಷ ರೂ. ಕಳಕೊಂಡ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಬ್ರಾಯನ್ ಡಾಯಸ್, ಡೆರಲ್ ತಾವ್ರೋ, ಫ್ಲೇವಿ ತಾವ್ರೋ ಹಾಗೂ ಸಚಿನ್ ಕಾರ್ಲೋಸ್ ಎಂಬವರು ಯುಎಸ್ ಬಿಸ್ನ್‌ಸ್ ವರ್ಲ್ಡ್ ಕಂಪೆನಿ ಹೈಡ್ರಸ್ 7 ಬ್ಲಾಕ್ ಚೈನ್ ಟೆಕ್ನಾಲಜಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. ಅದರಂತೆ ತಾನು ಹಂತ ಹಂತವಾಗಿ ನಗದು ರೂಪದಲ್ಲಿ 39,61,750 ರೂ.ವನ್ನು ಪಾವತಿಸಿದ್ದೆ. 20 ತಿಂಗಳವರೆಗೆ ಪ್ರತಿ ತಿಂಗಳು 2,400 ಯುಎಸ್ ಡಾಲರ್‌ನಂತೆ ಲಾಭಾಂಶ ನೀಡುವುದಾಗಿ ತಿಳಿಸಿದ್ದು, ಅದರಂತೆ ಒಂದು ಕಂತು 1.74 ಲಕ್ಷ ರೂ.ವನ್ನು ಮಾತ್ರ ಆರೋಪಿಗಳು ಪಾವತಿ ಮಾಡಿದ್ದಾರೆ. ಉಳಿದ 37,79,750 ರೂ.ವನ್ನಾಗಲೀ, ಲಾಭಾಂಶವನ್ನಾಗಲೀ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News