×
Ad

ಮೈ ಭಾರತ್ ನಾಗರಿಕ ರಕ್ಷಣಾ ಸ್ವಯಂ ಸೇವಕ: ಯುವಕರಿಂದ ನೋಂದಣಿ ಆಹ್ವಾನ

Update: 2025-05-14 20:10 IST

ಮಂಗಳೂರು: ಮೈ ಭಾರತ ಯುವ ಜನರನ್ನು ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿ ಕೊಳ್ಳಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ದೇಶಾದ್ಯಂತ ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಸಕ್ರಿಯವಾಗಿ ಪ್ರೇರೇಪಿಸು ತ್ತಿದೆ. ದೇಶವ್ಯಾಪಿ ಆಹ್ವಾನವು ತುರ್ತು ಪರಿಸ್ಥಿತಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಕಾರಣಕ್ಕಾಗಿ ಮಹತ್ವಪೂರ್ಣ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶವನ್ನು ಹೊಂದಿದೆ.

ಈ ಯೋಜನೆಯು ಉತ್ತಮ ತರಬೇತಿ ಪಡೆದ, ಸ್ಪಂದಿಸುವ ಮತ್ತು ಆತ್ಮ ಸ್ಥೈರ್ಯದಿಂದಿರುವ ಸ್ವಯಂಸೇವಕರ ದಳವನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಸಾರ್ವಜನಿಕ ತುರ್ತು ಪರಿಸ್ಥಿತಿಗಳು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ಉಪಯೋಗವಾಗಲಿದೆ.

ಪ್ರಸ್ತುತ ಪರಿಸ್ಥಿತಿ ಮತ್ತು ಉದಯೋನ್ಮುಖ ಸುರಕ್ಷತಾ ಚಿಂತನೆಗಳನ್ನು ಮನಗಂಡು, ಸಮುದಾಯ ಆಧಾರಿತ ಪ್ರತಿಕ್ರಿಯಾ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯತೆಯು ಹೆಚ್ಚಾಗಿದೆ. ನಾಗರಿಕ ರಕ್ಷಣಾ ಸ್ವಯಂಸೇವಕರು ಈ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು ಸ್ಥಳೀಯ ಅಧಿಕಾರಿಗಳಿಗೆ ವಿವಿಧ ಸೇವೆಗಳ ಮೂಲಕ ಬೆಂಬಲ ನೀಡುತ್ತಾರೆ. ಇದರಲ್ಲಿ ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಾಚರಣೆಗಳು, ಪ್ರಾಥಮಿಕ ಚಿಕಿತ್ಸೆ ಮತ್ತು ತುರ್ತು ಆರೈಕೆ, ಸಂಚಾರ ನಿರ್ವಹಣೆ, ಜನಸಮೂಹ ನಿಯಂತ್ರಣ, ಸಾರ್ವಜನಿಕ ಭದ್ರತೆ, ಮತ್ತು ವಿಪತ್ತು ಪ್ರತಿಕ್ರಿಯೆ ಮತ್ತು ಪುನಶ್ಚೇತನ ಕಾರ್ಯಗಳಲ್ಲಿ ಸಹಾಯ ಮಾಡುವುದು ಒಳಗೊಂಡಿದೆ. ಸಿದ್ಧತೆಯುಳ್ಳ ಮತ್ತು ತರಬೇತಿಯಾದ ನಾಗರಿಕ ಪಡೆ ಇದಾಗಿದ್ದು, ಮೈ ಭಾರತ ತನ್ನದಾದ ಕೊಡುಗೆ ನೀಡಲು ಬದ್ಧವಾಗಿದೆ.

ಮೈ ಭಾರತ ತನ್ನ ಚುರುಕಾದ ಯುವ ಸ್ವಯಂಸೇವಕರ ಜಾಲದೊಂದಿಗೆ ಉತ್ಸಾಹಭರಿತ ಯುವ ನಾಗರಿಕರನ್ನು ಈ ಮಹತ್ವದ ಕಾರ್ಯಕ್ಕಾಗಿ ಮುಂದೆ ಬಂದು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಆಸಕ್ತರು ಮೈ ಭಾರತ ಪೋರ್ಟಲ್ ಮೂಲಕ ಹೆಸರು ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ (ಮೊ.ಸಂ: 9961332968) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News