ಉಳ್ಳಾಲ ಉರೂಸ್: ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಹೊರೆ ಕಾಣಿಕೆ ಸಮರ್ಪಣೆ
ಉಳ್ಳಾಲ, ಮೇ 15: ಸದ್ಯ ನಡೆಯುತ್ತಿರುವ ಉಳ್ಳಾಲ ದರ್ಗಾ ಉರೂಸ್ ಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಹೊರೆ ಕಾಣಿಕೆ ಸಮರ್ಪಣೆ ಕಾರ್ಯ ಬುಧವಾರ ಸಂಜೆ ನಡೆಯಿತು.
ಕುರಿಗಳು ಮತ್ತು ಎರಡು ಟನ್ ಬಾಸ್ಮತಿ ಅಕ್ಕಿಯನ್ನು ಹೊರೆ ಕಾಣಿಕೆಯಾಗಿ ಸಮರ್ಪಿಸಿದರು. ಹೊರೆ ಕಾಣಿಕೆ ಸ್ವೀಕರಿಸಿದ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮನ್ಸೂರ್ ಮಂಚಿಲ, ದಿನೇಶ್ ರೈ, ಕಾಂಗ್ರೆಸ್ ಮುಖಂಡರಾದ ಉಸ್ಮಾನ್ ಕಲ್ಲಾಪು, ಬಾಝಿಲ್ ಡಿಸೋಜ, ರಿಯಾದ್ ಮುಕ್ಕಚ್ಚೇರಿ, ರಾಜ ಬಂಡಸಾಲೆ, ರವಿ ಕಾಪಿಕಾಡ್, ಪುರುಷೋತ್ತಮ ಪಿಲಾರ್, ದಾಮೋದರ ಕೋಟೆಕಾರ್, ಪ್ರೇಮನಾಥ್ ಕೊಲ್ಯ, ರಿಚರ್ಡ್ ವೇಗಸ್, ತಿಮ್ಮಪ್ಪ ಪೂಜಾರಿ, ವಿನೋದ್ ಒಂಭತ್ತುಕೆರೆ, ಸೈಫುಲ್ಲಾ ಸೋಮೇಶ್ವರ, ಅಮೀರ್ ಕೋಡಿ, ಇಸ್ಮಾಯೀಲ್ ಕಾಟಂಗರಗುಡ್ಡೆ, ಬಶೀರ್ ಕೊಳಂಗರೆ ಮತ್ತಿತರರು ಉಪಸ್ಥಿತರಿದ್ದರು.