×
Ad

ಘಾಟ್ ಪ್ರದೇಶದಲ್ಲಿ ಬಸ್ಸಿನಿಂದಿಳಿದು ಪ್ರಯಾಣಿಕ ನಾಪತ್ತೆ: ದೂರು ದಾಖಲು

Update: 2025-05-15 22:15 IST

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಕಾರ್ಮಿಕನೋರ್ವ ಶಿರಾಡಿ ಘಾಟ್ ಪ್ರದೇಶದಲ್ಲಿ ಮೂತ್ರ ವಿಸರ್ಜನೆಯ ನೆಪದಲ್ಲಿ ಇಳಿದಾತ ನಂತರ ನಾಪತ್ತೆಯಾದ ಬಗ್ಗೆ ಬಸ್ಸಿನ ನಿರ್ವಾಹಕ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ ಘಟನೆ ಮೇ 14 ರ ತಡ ರಾತ್ರಿ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಮಧ್ಯಪ್ರದೇಶದ ಕಾರ್ಮಿಕರ ತಂಡವೊಂದು ಪ್ರಯಾಣಿಸುತ್ತಿತ್ತು. ಪುತ್ತೂರಿನ ಸಂಸ್ಥೆಯೊಂದರಲ್ಲಿ ದುಡಿಯಲು ಆಗಮಿಸುತ್ತಿದ್ದ ಈ ತಂಡದಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದ ಶ್ರೀಪಾಲ್ ನರ್ರೆ (37) ಎಂಬಾತ ಶಿರಾಡಿ ಘಾಟ್ ಪ್ರವೇಶಿಸುತ್ತಿದ್ದಂತೆಯೇ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸುತ್ತಿದ್ದ. ಮೂತ್ರ ವಿಸರ್ಜನೆಯ ಕಾರಣಕ್ಕೆ ಈತ ವಿನಂತಿಸುತ್ತಿದ್ದಾನೆಂದು ಭಾವಿಸಿದ ಬಸ್ಸಿನ ನಿರ್ವಾಹಕ ಬಸ್ಸನ್ನು ನಿಲ್ಲಿಸುತ್ತಿದ್ದಂತೆಯೇ ಬಸ್ಸಿನಿಂದ ಇಳಿದವನೇ ಹೆದ್ದಾರಿಯಲ್ಲಿ ಹಿಂದಕ್ಕೆ ಓಡಿ ಕಣ್ಮರೆಯಾಗಿದ್ದಾನೆಂದು, ಒಂದಷ್ಟು ಹೊತ್ತು ಈತನಿಗಾಗಿ ಕಾದು ಆತ ಹಿಂದಿರುಗದೇ ಇದ್ದ ಕಾರಣಕ್ಕೆ ಬಸ್ಸನ್ನು ಚಲಾಯಿಸಿಕೊಂಡು ಬಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಸ್ಸಿನ ನಿರ್ವಾಹಕ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News