×
Ad

ಉಳ್ಳಾಲ: ಸನದುದಾನ ಮಹಾ ಸಮ್ಮೇಳನ, ಸಮಾರೋಪ

Update: 2025-05-15 22:46 IST

ಉಳ್ಳಾಲ : ಉಳ್ಳಾಲ ಉರೂಸ್ ಪ್ರಯುಕ್ತ ಸನದುದಾನ ಮಹಾ ಸಮ್ಮೇಳನ ಹಾಗೂ ಧಾರ್ಮಿಕ ಉಪನ್ಯಾಸ ಸಮಾರೋಪ ಸಮಾರಂಭ ಗುರುವಾರ ದರ್ಗಾ ವಠಾರದಲ್ಲಿ ನಡೆಯಿತು.

ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಅರೆಬಿಕ್ ಕಾಲೇಜು ಶಿಕ್ಷಣ ಪಡೆದು ತೇರ್ಗಡೆ ಹೊಂದಿದ 33 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳ್ ದುಆ ನೆರವೇರಿಸಿದರು.

ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೊನ್ಮಲ ಅಬ್ದುಲ್ ಖಾದಿರ್ ಮುಸ್ಲಿಯಾರ್ ಸನದುದಾನ ಭಾಷಣ ಮಾಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಸಯ್ಯಿದ್ ಅತ್ತಾವುಲ್ಲ ತಂಙಳ್ ಆಶೀರ್ವಚನ ನೀಡಿದರು. ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ , ಉಳ್ಳಾಲ ಕ್ಷೇತ್ರ ದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣ ಆಗಬೇಕು, ಶೈಕ್ಷಣಿಕ ಕೇಂದ್ರ ಬೆಳೆಯಬೇಕು. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ. ದರ್ಗಾ ಸೌಹಾರ್ದತೆಯ ಕೇಂದ್ರ ಆಗಬೇಕು ಎಂದರು.

ಮಾಜಿ ಸಚಿವ ಸಿ.ಎಮ್.ಇಬ್ರಾಹಿಂ ಮಾತನಾಡಿ, ಕರ್ನಾಟಕದ ಮುಖ್ಯಮಂತ್ರಿ ಆದರೆ ಎಷ್ಟು ಸಂತೋಷ ಆಗುತ್ತದೆಯೋ ಅಷ್ಟೇ ಸಂತೋಷ ಇಂದಿನ ದಿನ ನನಗೆ ಆಗುತ್ತದೆ. ದೊಡ್ಡ ಯಾತ್ರ ಸ್ಥಳ ಆಗಿರುವ ಉಳ್ಳಾಲ ಅಭಿವೃದ್ಧಿ ಆಗಬೇಕು, ಮೆಡಿಕಲ್ ಕಾಲೇಜು ಆರಂಭಿಸಬೇಕು.ಸ್ಪೀಕರ್ ಯುಟಿ ಖಾದರ್ ಪ್ರಯತ್ನ ಪಟ್ಟರೆ ದೊಡ್ಡ ಕಷ್ಟ ಆಗದು ಎಂದರು.

ಕೃಷ್ಣಾಪುರ ಖಾಝಿ ಇಬ್ರಾಹಿಮ್ ಮದನಿ ಮಾತನಾಡಿದರು.

ಈ ಕಾರ್ಯಕ್ರಮ ದಲ್ಲಿ ಅಶ್ರಫ್ ತಂಙಳ್ ಆದೂರು, ಅಬ್ದುಲ್ ರಹ್ಮಾನ್ ಮಸ್ಊದ್ ತಂಙಳ್, ಅಬ್ದುಲ್ ರಹ್ಮಾನ್ ಮದನಿ ಮೂಳೂರು, ಉಡುಪಿ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅರೆಬಿಕ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ , ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ಖಾದರ್ ಮದನಿ ಕಲ್ತರ, ಕುಂಞಾಲನ್ ಮದನಿ ಗೂಡಲ್ಲೂರು,ಎಂ.ವಿ ಅಬ್ದುಲ್ಲಾ ಮುಸ್ಲಿಯಾರ್ ಪಾಡಾವಳ್ಳಿ, ಶಾಫಿ ಸಅದಿ ಬೆಂಗಳೂರು, ಅಬ್ದುಲ್ ರಶೀದ್ ಝೈನಿ,ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಅಬ್ದುಲ್ ಖಾದಿರ್ ಮದನಿ ಪಲ್ಲಂಗೋಡು,ಸುಫ್ಯಾನ್ ಸಖಾಫಿ, ಯುಟಿ ಇಫ್ತಿಕರ್, ಯೆನೆಪೋಯ ವಿವಿ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಯು.ಎಸ್.ಹಂಝ, ವಕ್ಫ್ ಬೋರ್ಡ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ಜಿ.ಎ.ಬಾವ, ಶಾಕಿರ್ ಹಾಜಿ,ಶೆರೀಫ್ ಹಾಜಿ, ಝಕರಿಯಾ ಜೋಕಟ್ಟೆ, ಎಸ್ ಎಮ್ ಆರ್ ರಶೀದ್ ಹಾಜಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯರಾದ ಅಬ್ದುಲ್ ಖಾದರ್ ಕೋಡಿ, ಆಸೀಫ್ ಸುಂದರಿ ಬಾಗ್, ಅಬೂಬಕ್ಕರ್ ಹೈದರಲಿ ನಗರ, ಯೂಸುಫ್ ಉಳ್ಳಾಲ, ಝೈನುದ್ದೀನ್ ಮೇಲಂಗಡಿ, ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರೊ. ಇಬ್ರಾಹಿಂ ಅಹ್ಸನಿ, ನಜೀಬ್ ನೂರಾನಿ, ನುಹ್ಮಾನ್ ನೂರಾನಿ, ಇಸ್ಮಾಯಿಲ್ ಸ ಅದಿ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ಧೀನ್ ಸಖಾಫಿ ಸ್ವಾಗತಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News