×
Ad

ಚಾರ್ಮಾಡಿ ಜಲಾಲಿಯ್ಯ ನಗರ ಮದ್ರಸದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ

Update: 2025-05-18 23:13 IST

ಚಾರ್ಮಾಡಿ: ಮನುಷ್ಯರನ್ನು ಪೈಶಾಚಿಕ ಪ್ರವೃತ್ತಿಗಳ ದಾಸರಾಗಿಸುತ್ತಿರುವ ಮಾದಕ ದ್ರವ್ಯಗಳ ವಿರುದ್ಧದ ಹೋರಾಟ ಆಡಳಿತ ವರ್ಗದ ಕಣ್ಣು ತೆರೆಸುವಷ್ಟು ತೀಕ್ಷ್ಣ ರೀತಿಯಲ್ಲಿ ನಡೆಯಬೇಕಾದದ್ದು ಇಂದಿನ ಅನಿವಾರ್ಯತೆಗಳಲ್ಲೊಂದಾಗಿದೆ ಎಂದು ಚಾರ್ಮಾಡಿ ಜಲಾಲಿಯ್ಯ ನಗರ ಮುಖ್ಯ ಅಧ್ಯಾಪಕರಾದ ಹಾರಿಸ್ ಹನೀಫಿ ಕುಂಡಡ್ಕ ಹೇಳಿದ್ದಾರೆ.

ಅವರು ಚಾರ್ಮಾಡಿ ಇಝ್ಝತುಲ್ ಇಸ್ಲಾಂ ಮದ್ರಸ ವತಿಯಿಂದ ನಡೆದ ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ ಮಾತನಾಡುತ್ತಿದ್ದರು.

ಸಣ್ಣ ಪ್ರಾಯದ ಮಕ್ಕಳು ವಿದ್ಯಾರ್ಥಿಗಳು ಮತ್ತು ಯುವ ಜನತೆ ಮಾದಕ ವಸ್ತುಗಳ ಹಿಂದೆ ಬಿದ್ದು ಮನೆಗೂ ಊರಿಗೂ ಸವಾಲಾಗಿ ಪರಿಣಮಿಸಿದ್ದು ಎಲ್ಲಾ ಮಸೀದಿ, ಮಂದಿರ, ಚರ್ಚ್ ಗಳು ಸಹಿತ ಎಲ್ಲಾ ಸಂಘ ಸಂಸ್ಥೆಗಳು ಇದರ ವಿರುದ್ಧ ಹೋರಾಡಲು ಪಣ ತೊಡುವ ಮೂಲಕ ಸಮಾಜವನ್ನು ಸ್ವಸ್ಥ ಹಾಗೂ ಕೆಡುಕು ಮುಕ್ತ ಸಮಾವಾಗಿಸಲು ತಯಾರಾಗಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭ ಮಾದಕ ವಸ್ತುಗಳ ವಿರೋಧಿ ಅಭಿಯಾನದ ಅಂಗವಾಗಿ ಸಹಿ ಸಂಗ್ರಹ ನಡೆಸಲಾಯಿತು. ಈ ಸಂದರ್ಭ ಸ್ಥಳೀಯ ಖತೀಬರಾದ ರಫೀಕ್ ಫೈಝಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News