ಬಂಧುತ್ವ ಚಾರಿಟೇಬಲ್ ಟ್ರಸ್ಟ್‌ನಿಂದ ಪುಸ್ತಕ ವಿತರಣೆ, ಸನ್ಮಾನ ಕಾರ್ಯಕ್ರಮ
Update: 2025-06-01 19:49 IST
ಉಳ್ಳಾಲ, ಜೂ.1: ತೊಕ್ಕೊಟ್ಟಿನ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ರವಿವಾರ ಟ್ರಸ್ಟ್‌ನ ಕಚೇರಿಯಲ್ಲಿ ನಡೆಯಿತು.
ಟ್ರಸ್ಟ್ ಸ್ಥಾಪಕಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಅಬ್ದುಲ್ ಅಝೀಝ್ ಪುಣಚ ದುಆಗೈದರು. ಪತ್ರಕರ್ತ ಲೋಹಾನಿ, ಸಮಾಜ ಸೇವಕರಾದ ನವೀನ್ ನಾಯಕ್, ಅಹ್ಮದ್ ಶರೀಫ್, ಬಂಧುತ್ವ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿಗಳಾದ ಅಬ್ದುಲ್ ನಝೀರ್, ಆಸೀಫ್ ಬಬ್ಬುಕಟ್ಟೆ, ಸದಸ್ಯರಾದ ಇಮ್ತಿಯಾಝ್ ಹುಸೈನ್, ಮಕ್ಬೂಲ್, ಝೀಶಾನ್, ಝುಬೈದಾ, ಸೌಮ್ಯ, ಮೈಮೂನಾ, ಶಮೀಮಾ ಉಪಸ್ಥಿತರಿದ್ದರು.
ಈ ಸಂದರ್ಭ ಗ್ರೀನ್‌ಸಿಟಿಯ ಹಂಝ, ನಾಟಿ ವೈದ್ಯ ಮುಹಮ್ಮದ್ ಕುಂಞಿ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.