ಕುರ್ಬಾನಿಗೆ ಅವಕಾಶ ಕಲ್ಪಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲೀಗ್ ಮನವಿ
Update: 2025-06-04 19:35 IST
ಮಂಗಳೂರು, ಜೂ.5: ಬಕ್ರೀದ್ ಹಬ್ಬವು ಜೂ.7ರಂದು ಆಚರಿಸಲ್ಪಡಲಿದೆ. ಈ ಸಂದರ್ಭ ಜಾನುವಾರುಗಳ ಕುರ್ಬಾನಿ ಮಾಡಿ ಮಾಂಸವನ್ನು ಅರ್ಹ ಬಡವರಿಗೆ ವಿತರಿಸಲಾಗುತ್ತದೆ. ಈ ಪ್ರಕ್ರಿಯೆಯು ಮೂರು ದಿನಗಳ ಕಾಲ ಇರಲಿದೆ. ಈ ಸಂದರ್ಭ ಕುರ್ಬಾನಿಗೆ ಸಂಬಂಧಪಟ್ಟ ಜಾನುವಾರುಗಳ ಸಾಗಾಟ ಸಾಮಾನ್ಯವಾಗಿ ರುತ್ತದೆ. ಹಾಗಾಗಿ ನಿಯಮಾನುಸಾರ ಸಾಗಾಟಕ್ಕೆ ಅವಕಾಶ ನೀಡಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಮನವಿ ಸಲ್ಲಿಸಿದೆ.
ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿ. ಅಬ್ದುರ‌್ರಹ್ಮಾನ್, ಕೋಶಾಧಿಕಾರಿ ರಿಯಾಝ್ ಹರೇಕಳ, ಉಪಾಧ್ಯಕ್ಷ ಎಚ್.ಮುಹಮ್ಮದ್ ಇಸ್ಮಾಯಿಲ್, ಕೆ.ಸಿ. ಅಬ್ದುಲ್ ಖಾದರ್, ಸಂಶುದ್ದೀನ್ ಕುದ್ರೋಳಿ ನಿಯೋಗದಲ್ಲಿದ್ದರು.