×
Ad

ಕೊಣಾಜೆ| ಮಾದಕ ಪದಾರ್ಥ ಸೇವಿಸಿದ ಆರೋಪ; ಐವರು ಪೊಲೀಸ್ ವಶಕ್ಕೆ

Update: 2025-06-12 21:40 IST

ಕೊಣಾಜೆ: ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಮಾದಕ ಪದಾರ್ಥ‌ ಸೇವಿಸಿದ ಐದು ಜನರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಮಹಮ್ಮದ್ ಸಿರಾಜುದ್ದೀನ್ ಶಾಕೀರ್(25) , ಹಸನ್ ಸಾಧಿಕ್ (20), ಅಶ್ವನ್ ಆರಿನ್ ವೇಗಸ್(18) , ಯಾಂಗ್ಲಿಸ್ಟ್ ಯಾಸ್ಟ್ರಸ್ ವೇಗಸ್ (22), ಅಬ್ಬಾಸ್ ಶಾನೀಫ್ (20) ಎಂದು ಗುರುತಿಸಲಾಗಿದೆ.

ಕೊಣಾಜೆ ಪೊಲೀಸರು ದೇರಳಕಟ್ಟೆ ಬಳಿ ಕಾರಿನಲ್ಲಿದ್ದ 5 ಜನ ಯುವಕರು ನಶೆಯಲ್ಲಿದ್ದಂತೆ ಇರುವುದನ್ನು ಕಂಡು ಅವರ ಬಳಿ ಹೋಗಿ ವಿಚಾರಿಸಿದ್ದು, ಬಳಿಕ ಸಮರ್ಪಕವಾಗಿ ಉತ್ತರಿಸದೇ ಇದ್ದಾಗ ಮಾದಕ ಪದಾರ್ಥ ಸೇವನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ. ನಂತರ ಅವರನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಹಾಜರುಪಡಿಸಿ ಪರೀಕ್ಷಿಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದಾಗಿ ದೃಢಪಟ್ಟಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News