×
Ad

ಬಂಟ್ವಾಳ| ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ, ನಿರ್ದೇಶಕರ ಅನರ್ಹತೆ: ಸುದರ್ಶನ ಜೈನ್

Update: 2025-06-12 22:12 IST

ಬಂಟ್ವಾಳ : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಯಾವುದೇ ಪದವಿಯನ್ನು ಅಲಂಕರಿಸಿದಂತೆ ಅನರ್ಹತೆಗೊಳಿಸಿ ದ.ಕ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಮೇ 27ರಂದು ಆದೇಶ ಮಾಡಿರುತ್ತಾರೆ ಎಂದು ಬ್ಯಾಂಕ್ ನ ಮಾಜಿ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದರು.

ಬಿ.ಸಿ.ರೋಡಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ‌ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕ್ ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಹಕಾರಿ ಕಾಯ್ದೆಯ ಕಲಂ 64 ರ ಅಡಿಯಲ್ಲಿ ದ.ಕ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ತನಿಖೆ ನಡೆಸಿ ಅವ್ಯವಹಾರ ಸಾಬೀತಾದ ಹಿನ್ನಲೆಯಲ್ಲಿ ಸಹಕಾರಿ ಕಾಯ್ದೆಯ ಕಲಂ 29(ಸಿ) ರ ಅಡಿಯಲ್ಲಿ ವಜಾ ಮಾಡಲಾಗಿದೆ ಎಂದರು.

ಸದ್ರಿ ಆದೇಶಕ್ಕೆ ಪೂರಕವಾಗಿ ಬ್ಯಾಂಕಿನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪದ್ಮನಾಭ ಅವರು ಬ್ಯಾಂಕಿನಲ್ಲಿ ಕಾನೂನು ಬಾಹಿರ ವ್ಯವಹಾರಗಳನ್ನು ರಾಜಕೀಯ ಪ್ರೇರಿತವಾಗಿ ರೈತ ಸದಸ್ಯರಿಗೆ ಮಾರಕ ವಾಗುವ ರೀತಿಯಲ್ಲಿ ಅವ್ಯವಹಾರಗಳನ್ನು ನಡೆಸಿಕೊಂಡು ಬರುತ್ತಿದ್ದರು. ಈ ಬಗ್ಗೆ ಬ್ಯಾಂಕಿನ ನಿರ್ದೇಶಕರು ಮತ್ತು ಸದಸ್ಯರುಗಳು ರಾಜ್ಯ ಬ್ಯಾಂಕಿನ ಅಧ್ಯಕ್ಷರಿಗೆ ದೂರನ್ನು ನೀಡಿರುತ್ತಾರೆ. ಈ ದೂರಿಗೆ ಸ್ಪಂದಿಸಿ ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ರಾಜ್ಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ತನಿಖೆ ನಡೆಸಿ ಪದ್ಮನಾಭ ಅವರು ಬ್ಯಾಂಕಿನಲ್ಲಿ ಸಹಕಾರಿ ಕಾಯ್ದೆಗಳ ವಿರುದ್ದವಾಗಿ ಕಾನೂನು ಬಾಹಿರ ಅವ್ಯವಹಾರ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಫೆ. 6 ರಂದು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶವನ್ನು ಮಾಡಿದ್ದರು ಎಂದು ‌ಅವರು ತಿಳಿಸಿದರು.

ಪ್ರಸ್ತುತ ಇರುವ ಆಡಳಿತ ಮಂಡಳಿಯು ಚುನಾವಣಾ ದೃಷ್ಟಿಕೋನದಿಂದ ರಾಜಕೀಯ ಪ್ರೇರಿತವಾಗಿ ಚುನಾವಣೆಗೆ ಸಂಬಂಧಿಸಿ ಭೌಗೋಳಿಕವಾಗಿ ಕ್ಷೇತ್ರ ಪುನರ್ ವಿಂಗಡಣೆಯನ್ನು ಹಾಗೂ ಕ್ಷೇತ್ರ ಮೀಸಲಾತಿ ಯನ್ನು ಸಹಕಾರಿ ಕಾಯ್ದೆಯನ್ನು ಉಲ್ಲಂಘಣೆ ಮಾಡಿ ಕಳೆದ ಮಹಾಸಭೆಯಲ್ಲಿ ಬ್ಯಾಂಕಿನ ಎಲ್ಲಾ ಸದಸ್ಯ ರಿಗೆ ನೋಟಿಸ್‌ನ್ನು ನೀಡದೆ ಸಭೆಗೆ ಹಾಜರಾದ ಸದಸ್ಯರ ಸುಳ್ಳು ವಿವರಗಳನ್ನು ದಾಖಲಿಸಿ ನಿರಂತರ ಗಲಾಭೆಯನ್ನು ಸೃಷ್ಟಿಸಿ , ಮೇಲೆ ಉಲ್ಲೇಖಿಸಿದ ಭೌಗೋಳಿಕ ಕ್ಷೇತ್ರ ಪುನರ್ ವಿಂಗಡಣೆ ಕ್ಷೇತ್ರ ತಿದ್ದುಪಡಿಗೆ ಕಾನೂನು ಬಾಹಿರವಾಗಿ ರಾಜಕೀಯ ಮೀಸಲಾತಿಯ ದುರುದ್ದೇಶದಿಂದ ನಿರ್ಣಯವನ್ನು ಕೈಗೊಂಡಿರು ತ್ತಾರೆ. ಸಹಕಾರಿ ಸಂಘಗಳ ಉಪ ನಿಬಂಧಕರು ದ.ಕ ಜಲ್ಲೆ ಇವರಿಗೆ ಸಲ್ಲಿಸಿದ ದೂರು ಅರ್ಜಿಗೆ ಸಂಬಂಧಿಸಿ ತನಿಖೆ ನಡೆಸಿ, ಕಾನೂನು ಬಾಹಿರವಾಗಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಕ್ಷೇತ್ರ ಮೀಸಲಾತಿ ನಿಗದಿ ಮಾಡಿರುವುದನ್ನು ತಿರಸ್ಕರಿಸಿ, ಈ ಹಿಂದಿನ ಚುನಾವಣೆಯಲ್ಲಿ ಇದ್ದಂತಹ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿಯನ್ನು ಮುಂದುವರಿಯುವಂತೆ ಡಿ. 4 ರಂದು ಆದೇಶವನ್ನು ಮಾಡಿರುತ್ತಾರೆ ಎಂದು ದೂರುದಾರ, ಆಡಳಿತ ಮಂಡಳಿಯ ನಿದೇಶಕ ಸುದರ್ಶನ್ ಜೈನ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎಂ.ಅಬ್ಬಾಸ್ ಆಲಿ, ಚಂದ್ರಶೇಖರ್ ಭಂಡಾರಿ , ಬಾಲಕೃಷ್ಣ ಅಂಚನ್ ಮತ್ತು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News