×
Ad

ನೀಟ್ ಪರೀಕ್ಷೆ: ನಿಖಿಲ್ ಸೊನ್ನಾದ್ ರಾಜ್ಯಕ್ಕೆ ಪ್ರಥಮ

Update: 2025-06-14 21:21 IST

ಮಂಗಳೂರು, ಜೂ.14: ನಗರದ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನಾದ್ ನೀಟ್ ಪರೀಕ್ಷೆಯಲ್ಲಿ ಅಲ್ ಇಂಡಿಯಾದಲ್ಲಿ 17ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.

ವಿಜಾಪುರದ ನ್ಯೂರೋ ಸರ್ಜನ್ ಡಾ. ಸಿದ್ದಪ್ಪ ಸೊನ್ನಾದ್ ಹಾಗೂ ವಿಜಾಪುರದ ಸರಕಾರಿ ಆಸ್ಪತ್ರೆಯ ಕಣ್ಣಿನ ತಜ್ಞೆ ಡಾ. ಮೀನಾಕ್ಷಿ ಸೊನ್ನಾದ್ ದಂಪತಿಯ ಪುತ್ರನಾದ ನಿಖಿಲ್ ಸೊನ್ನಾದ್ ಈ ಹಿಂದೆ ಸಿಇಟಿಯ ಕೃಷಿಯಲ್ಲಿ 8ನೆ ರ‌್ಯಾಂಕ್ ಪಡೆದುಕೊಂಡಿದ್ದರು.

ನೀಟ್ ಪರೀಕ್ಷೆ ಬರೆದಾಗ 100 ರ‌್ಯಾಂಕ್ ನೊಳಗೆ ಬರುವ ನಿರೀಕ್ಷೆ ಇತ್ತು. ಆದರೆ 17ನೇ ರ‌್ಯಾಂಕ್ ಬಂದಿರುವುದು ಖುಷಿಯಾಗಿದೆ. ದಿನಾ ಮೂರು ಗಂಟೆಯ ಅಧ್ಯಯನ, ಎನ್‌ಸಿಇಆರ್‌ಟಿಯ ಪಠ್ಯಕ್ರಮದ ಬಳಕೆಯಿಂದ ಇದು ಸಾಧ್ಯವಾಗಿದೆ. ಮುಂದೆ ಏಮ್ಸ್‌ನಲ್ಲಿ ಶಿಕ್ಷಣ ಪಡೆಯುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ನಿಖಿಲ್ ಸೊನ್ನಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News