ದೇರಳಕಟ್ಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಸೀದಿಗೆ ಹಾನಿ
Update: 2025-06-14 22:02 IST
ದೇರಳಕಟ್ಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಸೀದಿಗೆ ಹಾನಿಯಾದ ಘಟನೆ ಮೋಂಟುಗೋಳಿ ಸಮೀಪದ ಗೌಸಿಯ ಮಸೀದಿಯಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ.
ಹವಾ ನಿಯಂತ್ರಿತ ಮೆಷಿನ್ ಗೆ ಹಿಡಿದ ಬೆಂಕಿ ಎಲ್ಲೆಡೆ ವ್ಯಾಪಿಸಿದ್ದು, ಗೋಡೆ ಹಾಗೂ ಇನ್ನಿತರ ವಸ್ತುಗಳು ಹಾನಿಯಾಗಿದೆ. ಈ ಘಟನೆಯನ್ನು ಗಮನಿಸಿದ ಆಡಳಿತ ಸಮಿತಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ