ಕೆತ್ತಿಕ್ಕಲ್ ನಲ್ಲಿ ಗುಡ್ಡ ಕುಸಿತ
Update: 2025-06-14 22:43 IST
ಮಂಗಳೂರು: ಕೆಲವು ವರ್ಷದ ಹಿಂದೆ ಭೂ ಕುಸಿತದ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದ ಕೆತ್ತಿಕ್ಕಲ್ ಪ್ರದೇಶದಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಸಂಭವಿಸಿದೆ.
ಇದರಿಂದ ಕೆತ್ತಿಕ್ಕಲ್ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ರಾತ್ರಿ ಸುಮಾರು 7.30ರ ವೇಳೆಗೆ ಗುಡ್ಡ ಕುಸಿದು ಮುಖ್ಯರಸ್ತೆಗೆ ಮಣ್ಣು, ಕಲ್ಲು ಬಿದ್ದಿದೆ. ಜೊತೆಗೆ ಮಳೆನೀರು ಇಳಿಜಾರು ಪ್ರದೇಶದಿಂದ ಹರಿದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.