×
Ad

ವಿಟ್ಲ: ವಾಣಿಜ್ಯ ಸಂಕೀರ್ಣಗಳು ಜಲಾವೃತ; ತುಂಡಾಗಿ ಬಿದ್ದ ವಿದ್ಯುತ್ ಕಂಬಗಳು

Update: 2025-06-15 19:02 IST

ವಿಟ್ಲ: ಸೂರಿಕುಮೇರು ಸಮೀಪದ ಬಾಳ್ತಿಲ ಎಂಬಲ್ಲಿ ಇಂದು ಬೆಳಗ್ಗೆ ಮತ್ತೆ ಎರಡು ವಾಣಿಜ್ಯ ಸಂಕೀರ್ಣ ಗಳು ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ.

ಕೆ.ಎನ್.ಆರ್.ಸಿ.ಕಂಪೆನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮಾಡಿದ ಅವಾಂತರವೇ ಕಟ್ಟಡ ಗಳು ಜಲಾವೃತಗೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಶನಿವಾರ ಬೆಳಗ್ಗೆ  ವಾಸ್ತವ್ಯ ಇಲ್ಲದ ಮನೆ ಜಲಾವೃತಗೊಂಡಿದ್ದು ಸಮೀಪ ಮತ್ತೆರಡು ವಾಸ್ತವ್ಯದ ವಾಣಿಜ್ಯ ಸಂಕೀರ್ಣ ಗಳು ಜಲಾವೃತಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಕಂಪೆನಿಯವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಕಟ್ಟಡ ಸಹಿತ ಕೃಷಿ ತೋಟ ಹಾಗೂ ವಿದ್ಯುತ್ ‌ಕಂಬಗಳಿಗೆ ಹಾನಿಯಾಗಿದ್ದು, ಈ ಪರಿಸರದಲ್ಲಿ ಕರೆಂಟ್ ಇಲ್ಲದೆ ಕತ್ತಲೆಯಲ್ಲಿರಬೇಕಾಗಿದೆ.

ಸ್ಥಳಕ್ಕೆ ಕಂದಾಯ ಅಧಿಕಾರಿ ವಿಜಯ್ ಬೇಟಿ ನೀಡಿ ತಾತ್ಕಾಲಿಕ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News