ಅರ್ಕುಳ: ಹಲ್ಲೆಗೊಳಗಾದ ವ್ಯಕ್ತಿ ಮೃತ್ಯು
Update: 2025-06-16 21:50 IST
ಮಂಗಳೂರು: ನಗರ ಹೊರವಲಯದ ಅರ್ಕುಳ ಎಂಬಲ್ಲಿ ಮರದ ಕೋಲಿನಿಂದ ಹೊಡೆತಕ್ಕೊಳಗಾದ ಲೋಕಯ್ಯ ಟಿ. ಯಾನೆ ಲೋಕಯ್ಯ ಮೂಲ್ಯ (59) ಎಂಬವರು ಮೃತಪಟ್ಟ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ನಿವಾಸಿ ರಮೇಶ್ ಗಾಣಿಗ ಎಂಬಾತನು ಶನಿವಾರ ಬೆಳಗ್ಗೆ ಮರದ ಕೋಲಿನಿಂದ ಲೋಕಯ್ಯರ ಬೆನ್ನು, ಕೈಗೆ ಯದ್ವಾತದ್ವ ಹೊಡೆದಿದ್ದ ಎನ್ನಲಾಗಿದೆ. ತಕ್ಷಣ ಸ್ಥಳೀಯರು ರಮೇಶ್‌ನನ್ನು ತಡೆದು ವಿಚಾರಿಸಿ ದಾಗ ಕೆಲವು ದಿನಗಳಿಂದ ಮಧ್ಯರಾತ್ರಿ ಈತ ನಮ್ಮ ಮನೆಯ ಬಾಗಿಲು ತಟ್ಟಿ ತೊಂದರೆ ನೀಡುತ್ತಿದ್ದಾನೆ. ಇಂತಹವರು ಇದ್ದವರಿಗೆಲ್ಲ ತೊಂದರೆ ಕೊಡುವುದಕ್ಕಿಂತ ಸತ್ತು ಹೋದರೆ ಯಾರಿಗೂ ನಷ್ಟವಿಲ್ಲ ಎಂದು ಆಕ್ರೋಶದಿಂದ ತಿಳಿಸಿದ್ದ ಎಂದು ಆರೋಪಿಸಲಾಗಿದೆ.
ಹೊಡೆತ ತಿಂದ ಲೋಕಯ್ಯರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.