×
Ad

ಮೀಫ್: ನರ್ಸಿಂಗ್, ಪ್ಯಾರಾ ಮೆಡಿಕಲ್‌ನಲ್ಲಿ ಉಚಿತ ಸೀಟ್‌ಗಳಿಗೆ ಅರ್ಜಿ ಆಹ್ವಾನ

Update: 2025-06-19 17:32 IST

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರತಿಷ್ಠಿತ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ಮೀಫ್ ಮೂಲಕ ನೀಡಲಾಗುವ ವಿವಿಧ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್‌ನ ವಿವಿಧ ಕೋರ್ಸ್‌ಗಳ 60 ಉಚಿತ ಸೀಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿವರ ಇಂತಿವೆ:-

ಫಾರ್ಮಸಿ, ನರ್ಸಿಂಗ್, ಫಿಸಿಯೊಥೆರಪಿ, ಅಲೈಡ್(ಬಿ.ಎಸ್ಸಿ -ಎಂಎಲ್‌ಟಿ, ಎಂಐಟಿ, ಟ್ರಾಮಾ ಆ್ಯಂಡ್ ರೆಸ್ಪಿರೇಟರಿ) , ಪ್ಯಾರಾ ಮೆಡಿಕಲ್ (ಡಿಪ್ಲೊಮಾ-ಎಂಎಲ್‌ಟಿ, ಎಂಐಟಿ, ಒಟಿ,ಎಟ, ಡಯಾಲಿಸಿಸ್, ಅಪ್ತಮಾಲಜಿ)

ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಜೂನ್ 30, 2025 ಒಳಗಾಗಿ ಮೀಫ್ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆಗಳು ಮೀಫ್ ಕಚೇರಿಯಲ್ಲಿ ಲಭ್ಯವಿರುವುದು. ಹೆಚ್ಚಿನ ಮಾಹಿತಿಗಾಗಿ ಅಶ್ರಫ್ ಬಾವಾ (8792115666) ಮತ್ತು ಹೈದರ್ ಮರ್ದಾಳ (88842 02361) ಇವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News