×
Ad

ಕಾರಿನಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ: ಆರೋಪಿ ಸೆರೆ

Update: 2025-06-19 20:39 IST

ಉಳ್ಳಾಲ: ಕಾರಿನಲ್ಲಿ ಎಂಡಿಎಂಎ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಬ್ದುಲ್ ರಶೀದ್ ಮೊಯುದ್ದೀನ್ ಎಂದು ಗುರುತಿಸಲಾಗಿದೆ.

ಈತನು ದೇರಳಕಟ್ಟೆಯ ಪನೀರ್ ನಿವಾಸಿಗಳಾದ ಇಲ್ಯಾಸ್ ಯಾನೆ ಎರಿಟಿಗಾ ಇಲ್ಯಾಸ್ ಹಾಗೂ ಅಟೋ ಅಬ್ಬಾಸ್ ಅವರಿಂದ ಮಾದಕವನ್ನು ಖರೀದಿ ಮಾಡಿ ಅದನ್ನು ಕಾರ್ ನಲ್ಲಿ ಸೋಮೇಶ್ವರ ರೆಸಾರ್ಟ್ ಒಂದರ ಬಳಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದ್ದು,  ಈ ಬಗ್ಗೆ ಮಾಹಿತಿ ಪಡೆದ ‌ಸಿಸಿಬಿ ಪೊಲೀಸರು ರೆಸಾರ್ಟ್ ಗೆ ದಾಳಿ ಮಾಡಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.

ಈ ವೇಳೆ ಆರೋಪಿ ಅಬ್ದುಲ್ ರಶೀದ್ ಪರಾರಿ ಆಗಲು ಯತ್ನಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ಕಾರಿನಲ್ಲಿದ್ದ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News