ಸಬಲೀಕರಣದತ್ತ ಮಹಿಳೆಯರು ದೃಢ ಹೆಜ್ಜೆ ಇರಿಸಬೇಕಾಗಿದೆ: ಸ್ವರ್ಣ ಭಟ್
ಮಂಗಳೂರು, ಜೂ.19: ಮೀಸಲಾತಿ ಸಮಾನತೆ ಸಬಲೀಕರಣದತ್ತ ಮಹಿಳೆಯರು ದೃಢ ಹೆಜ್ಜೆ ಇಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಸ್ವರ್ಣಾ ಭಟ್ ಹೇಳಿದ್ದಾರೆ.
ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮ್ಮೇಳನದ ಸಿದ್ದತೆಯ ಪ್ರಯುಕ್ತ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸ್ವಾಗತ ಸಮಿತಿಯ ರಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಐವತ್ತು ಶೇಕಡಾ ಅವಕಾಶ ದೂರದ ಕನಸಾಗಿಯೆ ಉಳಿದಿದೆ. ಮುಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲಿಯೂ ಹೆಣ್ಣುಮಕ್ಕಳಿಗೆ ಸರಿಯಾದ ಪ್ರಾತಿನಿಧ್ಯ ದೊರಕ ದಿರುವುದು ವಿಷಾದನೀಯ ಎಂದರು.
ಸಭೆಯನ್ನುದ್ದೇಶಿಸಿ ಜೆಎಂಎಸ್ ಹಿರಿಯ ನಾಯಕಿ ಪದ್ಮಾವತಿ ಶೆಟ್ಟಿ, ಮಂಜುಳಾ ನಾಯಕ್, ಗ್ರೇಟ್ಟಾ ಟೀಚರ್, ಪ್ಲೇವಿ ಕ್ರಾಸ್ತಾ ಅತ್ತಾವರ, ಪೌಲಿ ಮೇಡಂ, ಪ್ರಮೀಳಾ ಶಕ್ತಿನಗರ ಮಾತನಾಡಿದರು.
ಜಯಂತಿ ಬಿ ಶೆಟ್ಟಿ ಸಭೆಯ ಅಧ್ಯಕ್ಷತ್ನೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರಾದ ಶಾಲಿನಿ, ಜೆಎಂಎಸ್ ನಾಯಕರಾದ ಭಾರತಿ ಬೋಳಾರ ಉಪಸ್ಥಿತರಿದ್ದರು.
ಸಭೆಯಲ್ಲಿ ಮಹಿಳಾಪರ ಚಿಂತಕರಾದ ಅರ್ಚನಾ ರಾಮಚಂದ್ರ, ಮರ್ಲಿನ್ ರೇಗೋ, ಬದ್ರುನ್ನೀಸಾ, ಉಮೈನಾ, ಪ್ರಮೋದಿನಿ ಕಲ್ಲಾಪು, ಜಯಲಕ್ಷ್ಮಿ, ಆಶಾ ಸಂಜೀವನಾ, ದೀಷಾ ರೀಟಾ ಪುರ್ತಾಡೋ, ಚಂದ್ರಿಕಾ, ಚಿತ್ರಲೇಖಾ, ವೀಣಾ ಸಂತೋಷ್, ಹೇಮಾ ಪಚ್ಚನಾಡಿ, ಮಾಲತಿ ತೊಕ್ಕೋಟು, ಪೂರ್ವಿ ಶೆಟ್ಟಿ, ಗೌತಮಿ, ವೈಲೆಟ್, ಸ್ವಾತಿ ಮನೋಜ್ ವಾಮಂಜೂರು, ಮಾನಸ, ಗುಣವತಿ ಕೀನ್ಯಾ ಭಾಗವಹಿಸಿದ್ದರು.
ಜುಲೈ 27ರಂದು ನಡೆಯಲಿರುವ ಜಿಲ್ಲಾ ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾ ಯಿತು. ಗೌರವಾಧ್ಯಕ್ಷೆಯಾಗಿ ಹಿರಿಯ ರಂಗ ಕಲಾವಿದೆ ಗೀತಾ ಸುರತ್ಕಲ್, ಅಧ್ಯಕ್ಷರಾಗಿ ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಧಾನ ಕಾರ್ಯದರ್ಶಿ ಜಯಂತಿ ಬಿ ಶೆಟ್ಟಿ, ಖಜಾಂಚಿ ಆಗಿ ಅಸುಂತ ಡಿ ಸೋಜರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಚಂದ್ರಕಲಾ ನಂದಾವರ, ಬಿ ಎಂ ರೋಹಿಣಿ, ಗುಲಾಬಿ ಬಿಳಿಮಲೆ, ಶಾಲಿನಿ, ಧನವಂತಿ ನೀರುಮಾರ್ಗ ಮಂಜುಳಾ ನಾಯಕ್ ಸೇರಿದಂತೆ ಸುಮಾರು 75 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.