×
Ad

ಪರಿಪೂರ್ಣ ಆರೋಗ್ಯ ಮತ್ತು ವಿಶ್ವಶಾಂತಿಗೆ ಯೋಗ ಅವಶ್ಯಕ: ಪ್ರೊ.ಪಿ.ಎಲ್. ಧರ್ಮ

Update: 2025-06-21 20:09 IST

ಕೊಣಾಜೆ: ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗದ ನಿತ್ಯ ಅಭ್ಯಾಸಗಳು ಬಹಳ ಅವಶ್ಯಕ ಜೊತೆಗೆ ವಿಶ್ವಶಾಂತಿಯನ್ನು ಸಾಧಿಸುವಲ್ಲಿ ಯೋಗಶಾಸ್ತ್ರ ಅಧ್ಯಯನವು ಮಹತ್ತರವಾದ ಕೊಡುಗೆಯನ್ನು ಕೊಡುವಲ್ಲಿ ಸಮರ್ಥವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಹಾಗು ಯೋಗವಿಜ್ಞಾನ ವಿಭಾಗ ಹಾಗೂ ಧರ್ಮ ನಿಧಿ ಯೋಗಪೀಠಗಳ ವತಿಯಿಂದ ಭಾರತ ಸರಕಾರದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ಇದರ ಸಹಯೋಗದಲ್ಲಿ ೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ನ ದಕ್ಷಿಣ ವಲಯದ ಮುಖ್ಯಸ್ಥ ಪ್ರದೀಪ್ ಕುಮಾರ್ ಯೋಗದ ಮಹತ್ವ ಮತ್ತು ಐಸಿಸಿಆರ್ ಮೂಲಕ ಯೋಗ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅಂತ ರಾಷ್ಟೀಯ ಮಟ್ಟದಲ್ಲಿ ಯೋಗ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಬಹುದು ಎಂದರು.

ಮಂಗಳೂರು ವಿವಿ ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ ಈಗಿನ ಜೀವನಕ್ರಮದಲ್ಲಿ ದೈಹಿಕ ಚಟಿವಟಿಕೆಗಳಿಗೆ ಅವಕಾಶ ತುಂಬಾ ಕಡಿಮೆಯಾಗುತ್ತಿದ್ದು, ಇದು ಅನೇಕ ದುಷ್ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟುಮಾಡುತ್ತಿದೆ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬನು ಪ್ರತೀ ದಿನವೂ ಸ್ವಲ್ಪ ಸಮಯವಾದರೂ ಯೋಗಾಭ್ಯಾಸ ಮಾಡಬೇಕು ಎಂದ ಅವರು ಭಾರತ ಸರಕಾರದ ಆಯುಷ್ ಇಲಾಖೆಯ `ಯೋಗ ಬ್ರೇಕ್' ಉಪಕ್ರಮವನ್ನು ಉಲ್ಲೇಖಿಸಿದರು.

ಆಯುಷ್ ಮಂತ್ರಾಲಯದ ಮಾರ್ಗದರ್ಶಿ ಸೂತ್ರಕ್ಕೆ ಅನ್ವಯವಾಗಿ ಯೋಗಾಭ್ಯಾಸವನ್ನು ವಿಭಾಗದ ಉಪನ್ಯಾಸಕ ಡಾ.ಉದಯ ಕುಮಾರ್‌ಕೆ., ಡಾ.ಅಜಿತೇಶ್ ಎನ್. ಎಚ್., ವಿನಾಯಕ ಕೃಷ್ಣ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಅಧ್ಯಕ್ಷರುಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಮಾನವ ಪ್ರಜ್ಞೆ ಹಾಗು ಯೋಗವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಂಜಯ್ಯ ಡಿ.ಎಚ್. ಸ್ವಾಗತಿಸಿದರು. ಉಪನ್ಯಾಸಕ ಡಾ.ತಿರುಮಲೇಶ್ವರ ಪ್ರಸಾದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News