×
Ad

ಬೆಳ್ತಂಗಡಿ ಎಸ್‌ವೈಎಸ್ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಸಮಾಪ್ತಿ

Update: 2025-06-21 20:12 IST

ಬೆಳ್ತಂಗಡಿ, ಜೂ.21: ಎಸ್‌ವೈಎಸ್ ಬೆಳ್ತಂಗಡಿ ರೆನ್ ಸಮಿತಿ ವತಿಯಿಂದ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಗುರುವಾಯನಕೆರೆಯ ಎಫ್‌ಎಂ ಗಾರ್ಡನ್‌ನಲ್ಲಿ ನಡೆಯಿತು.

ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಅಬ್ದುರ‌್ರಹ್ಮಾನ್ ಸಾದತ್ ಬಾಅಲವಿ ತಂಙಳ್ ಉಲ್ತೂರು ಕಾರ್ಯಕ್ರಮ ಉದ್ಘಾಟಿಸಿದರು.

ಎಸ್‌ವೈಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಅಬ್ದುರ‌್ರಹ್ಮಾನ್ ಸಖಾಫಿ ಆಲಂದಿಲ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್‌ಹಾದಿ ಮಲ್‌ಜಹ್ ದುಆ ಮಜ್ಲಿಸ್‌ಗೆ ನೇತೃತ್ವ ನೀಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತ್ವಾಹಿರ್ ಸಖಾಫಿ ಮಂಜೇರಿ ಸ್ಮಾರ್ಟ್ ಲೀಡರ್ಸ್ ವಿಷಯದಲ್ಲಿ, ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು ಸಂಘಟನೆಯ ಜವಾಬ್ದಾರಿ ವಿಷಯದಲ್ಲಿ ತರಗತಿ ನಡೆಸಿದರು.

ಬದ್ರುದ್ದೀನ್ ಅಲ್‌ಹಾದಿ ತಂಳ್ ಮದನಿ ಪೊಮ್ಮಾಜೆ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಹಂಝ ಮದನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಪಟ್ಟೂರು, ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯಾಧ್ಯಕ್ಷ ಉಮರ್ ಜಿಕೆ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಸಿದ್ದೀಕ್ ಜೆಎಚ್, ಎಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಡಿವಿಷನ್ ಅಧ್ಯಕ್ಷ ಇಸ್‌ಹಾಖ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ನಾಸಿರ್ ಪದ್ದಂಡಡ್ಕ, ರೆನ್ ಕೋಶಾಧಿಕಾರಿ ರಝಾಕ್ ಸಖಾಫಿ ಮಡಂತ್ಯಾರು ಮತ್ತಿತರರು ಭಾಗವಹಿದ್ದರು

ಎಸ್‌ವೈಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿದರು. ಝೋನ್ ಸಂಘಟನಾ ಕಾರ್ಯದರ್ಶಿ ಜಮಾಲುದ್ದೀನ್ ಲತೀಫೀ ಲಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News