ಸಿಪಿಐ ಮಂಗಳೂರು ತಾಲೂಕು ಸಮ್ಮೇಳನ
ಮಂಗಳೂರು: ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ, ಅಸಹನೆಯಿಂದ ಯುವಕರ ಹತ್ಯೆಯಾಗುತ್ತಿದೆ. ಕೋಮು ಸೌಹಾರ್ದವನ್ನು ಕದಡಿ ತನ್ನ ರಾಜಕೀಯ ಹಿತ ಸಾಧನೆಗಾಗಿ ಯುವ ಜನಾಂಗವನ್ನು ದುರುಪಯೋಗಪಡಿಸಲಾಗುತ್ತಿದೆ. ಯುವಕರು ಇದಕ್ಕೆ ಬಲಿಯಾಗದೆ ತನ್ನ ಉತ್ತಮ ಉದ್ಯೊಗ, ಆರೋಗ್ಯ, ಶಿಕ್ಷಣಕ್ಕಾಗಿ ಒಟ್ಟಾಗಬೇಕು. ದ್ವೇಷದ ರಾಜಕೀಯ ಕೊನೆಗೊಳಿಸಬೇಕು. ಸಮಾಜವಾದ ಮುನ್ನಡೆಯಬೇಕು ಎಂದು ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ಕರೆ ನೀಡಿದರು.
ಮಂಗಳೂರಿನ ಬಿ.ಕಕ್ಕಿಲಾಯ ಭವನದ ಕಾ.ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ಸಂಗಾತಿಗಳಾದ ಬಿ.ಕೆ ಕೃಷ್ಣಪ್ಪ, ನಾರಾಯಣ ಬಜಾಲ್, ಸೀತಾ ಸಾಲ್ಯಾನ್, ನಳಿನಿ ಕೋಡಿಕಲ್‌ರ ಸ್ಮರಣಾರ್ಥ ವೇದಿಕೆಯಲ್ಲಿ ರವಿವಾರ ನಡೆದ ಸಿಪಿಐ ಪಕ್ಷದ ಮಂಗಳೂರು ತಾಲೂಕು ೨೫ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದ ಹಿರಿಯ ಮುಂದಾಳು ಕಾ. ಬಾಲಕೃಷ್ಣ ಶೆಟ್ಟಿ ಜಪ್ಪಿನಮೊಗರು ಧ್ವಜಾರೋಹನ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಎಚ್.ವಿ. ರಾವ್, ಎ.ಪ್ರಭಾಕರ್ ರಾವ್, ಸಂಜೀವಿ ಹಳೆಯಂಗಡಿ ಅವರನ್ನು ಒಳ ಗೊಂಡ ಅಧ್ಯಕ್ಷೀಯ ಮಂಡಳಿಯ ಸದಸ್ಯರು ಪ್ರತಿನಿಧಿ ಸಮ್ಮೇಳನ ನಡೆಸಿಕೊಟ್ಟರು.
ರಾಜಕೀಯ, ಚಟುವಟಿಕೆ, ಸಂಘಟನಾ ವರದಿ ಮತ್ತು ಲೆಕ್ಕಪತ್ರವನ್ನು ತಾಲೂಕು ಕಾರ್ಯದರ್ಶಿ ಕರುಣಾ ಕರ್ ಮಾರಿಪಲ್ಲ ಮಂಡಿಸಿದರು. ಚರ್ಚೆ ಮತ್ತು ತಿದ್ದುಪಡಿಗಳ ನಂತರ ವರದಿಯನ್ನು ಅಂಗೀಕರಿಸಲಾ ಯಿತು. ಇತ್ತೀಚೆಗೆ ಅಗಲಿದೆ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು.
2025ರ ಜುಲೈಯಲ್ಲಿ ವಿಟ್ಲದಲ್ಲಿ ಜರಗಲಿರುವ ಜಿಲ್ಲಾ ಸಮ್ಮೇಳನಕ್ಕೆ 16 ಪ್ರತಿನಿಧಿಗಳನ್ನು ಆಯ್ಕೆ ಮಾಡ ಲಾಯಿತು. ಅಲ್ಲದೆ ಮುಂದಿನ ಅವಧಿಗೆ ಕರುಣಾಕರ್ ಮಾರಿಪಲ್ಲ (ಕಾರ್ಯದರ್ಶಿ), ಕೃಷ್ಣಪ್ಪವಾಮಂಜೂರು, ಜಗತ್ಪಾಲ್ ಕೋಡಿಕಲ್ (ಸಹ ಕಾರ್ಯದರ್ಶಿಗಳು), ತಿಮ್ಮಪ್ಪಕಾವೂರು (ಕೋಶಾಧಿಕಾರಿ), ಪುಷ್ಪರಾಜ್ ಬೋಳೂರು, ದಿನೇಶ್ ಕಾಯರ್‌ಮಾರ್, ಸುಧಾಕರ್ ಉರ್ವ, ಗೀತಾ ಬಜಾಲ್, ಸುಧಾಕರ್ ಕಲ್ಲೂರು, ಮೀನಾಕ್ಷಿ ಶಾಂತಿಪಲ್ಕೆ, ಶಾಂತಾ ಕಳವಾರ್, ವೀರಮ್ಮ ಕರಂಬಾರು ಅವರನ್ನು ಆಯ್ಕೆ ಮಾಡಲಾಯಿತು.
ವಿ.ಎಸ್. ಬೇರಿಂಜ ಸ್ವಾಗತಿಸಿದರು. ಕರುಣಾಕರ್ ವಂದಿಸಿದರು.