×
Ad

ಉಪ್ಪಿನಂಗಡಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

Update: 2025-06-23 21:22 IST

ಉಪ್ಪಿನಂಗಡಿ: ರಾಜ್ಯ ಸರಕಾರದ ಭ್ರಷ್ಟಾಚಾರ ಹಾಗೂ ಜನ ವಿರೋಧಿ ನೀತಿ ಮತ್ತು ಕೋಮು ಆಧಾರಿತ ತುಷ್ಠೀಕರಣ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಉಪ್ಪಿನಂಗಡಿಯ ಗ್ರಾ.ಪಂ. ಕಚೇರಿಯ ಮುಂಭಾಗದಲ್ಲಿ ಜೂ.23ರಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು, ಕಾಂಗ್ರೆಸ್ ಸರಕಾರದ ದುರಾಡಳಿತ ಮಿತಿ ಮೀರಿದ್ದು, ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ ಕಲ್ಲು, ಮರಳು ಸಾಗಾಟಕ್ಕೆ ಅವಕಾಶ ನೀಡದಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ರೈತರಿಗೆ ಬೆಳೆ ವಿಮೆಯೂ ಬಂದಿಲ್ಲ. ಮಳೆ ಹಾನಿಗೂ ಪರಿಹಾರ ಕೊಡುವ ಕೆಲಸ ಸರಕಾರದಿಂದಾಗಿಲ್ಲ. ಪ್ರಾಕೃತಿಕ ವಿಕೋಪಡಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರಧವನ್ನು ಈ ಹಿಂದಿನ ಬಿಜೆಪಿ ಸರಕಾರ ನೀಡುತ್ತಿದ್ದರೆ, ಈಗಿನ ಸಿದ್ದರಾಮಯ್ಯ ಸರಕಾರ ಕೇವಲ 1.20 ಲಕ್ಷ ನೀಡಿ ಸಂತ್ರಸ್ತ ರನ್ನು ಕಡೆಗಣಿಸುತ್ತಿದೆ. ಮಳೆ ಹಾನಿ ಸಂದರ್ಭ ತುರ್ತು ಪರಿಹಾರಕ್ಕಾಗಿ ಪ್ರತಿ ಗ್ರಾ.ಪಂ.ಗೆ 30 ಸಾವಿರ ರೂ. ನೀಡುತ್ತೇನೆಂದು ಘೋಷಣೆ ಮಾಡಿದರೂ ಆ ದುಡ್ಡು ಇನ್ನೂ ಗ್ರಾ.ಪಂ. ಅನ್ನು ತಲುಪಿಲ್ಲ. ಇಲ್ಲಿನ ಶಾಸಕರು ಇಲ್ಲಿನ ಜನರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳದೇ ಕೇವಲ ಪ್ರಚಾರದ ಗಿಮಿಕ್‍ನಲ್ಲಿ ತೊಡಗಿದ್ದಾರೆ ಎಂದರು.

ಪಕ್ಷದ ಮುಖಂಡರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ನಾಡಿನ ಜನರನ್ನು ಸಮಾನವಾಗಿ ಕಾಣಬೇಕಾಗಿದ್ದ ಸರಕಾರ ಮುಸ್ಲಿಂ ಸಮುದಾಯದ ಹಿತಕ್ಕಾಗಿ ಮಾತ್ರ ಯೋಜನೆಗಳನ್ನು ರೂಪಿಸುತ್ತಿದೆ. ಬಡವರು ಮನೆ ಕಟ್ಟಲು ಮುಂದಾದರೆ ಅದಕ್ಕೆ ಹಲವು ಷರತ್ತುಗಳನ್ನು ಅಳವಡಿಸಿ ಮುಡಾ, ಪುಡಾಗ ಳಂತಹ ಪ್ರಾಧಿಕಾರಕ್ಕೆ ಅಲೆದಾಡಿಸುವ ಶಿಕ್ಷೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಪಕ್ಷದ ಮುಖಂಡ ರಾದ ಚಂದಪ್ಪ ಮೂಲ್ಯ, ಲೊಕೇಶ್ ಬೆತ್ತೋಡಿ ಮಾತನಾಡಿ, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷ ವಿದ್ಯಾಧರ ಜೈನ್, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲು, ಜಯಂತಿ, ವನಿತಾ, ಉಷಾ ನಾಯ್ಕ್, ಪಕ್ಷದ ಪ್ರಮುಖರಾದ ಉಮೇಶ್ ಶೆಣೈ ಎನ್., ಹರಿರಾಮಚಂದ್ರ, ಪ್ರಸಾದ್ ಬಂಡಾರಿ, ಚಂದ್ರಶೇಖರ, ಕಂಗ್ವೆ ವಿಶ್ವನಾಥ ಶೆಟ್ಟಿ, ದುರ್ಗಾಪ್ರಸಾದ್ ಬೊಳ್ಳಾವು, ರಾಧಾಕೃಷ್ಣ ಭಟ್ ಪೆರಿಯಡ್ಕ, ಸುಜಾತ ಕೃಷ್ಣ ಆಚಾರ್ಯ, ಆದೇಶ್ ಶೆಟ್ಟಿ, ಶ್ರೀರಾಮ ಭಟ್ ಪಾತಾಳ, ಚಿದಾನಂದ ಪೆರಿಯಡ್ಕ, ರಾಘವೇಂದ್ರ ನಾಯಕ್ ನಟ್ಟಿಬೈಲು, ರಾಜೇಶ್ ಕೊಡಂಗೆ, ರವಿನಂದನ್ ಹೆಗ್ಡೆ, ಹೊನ್ನಪ್ಪ ಗೌಡ ವರೆಕ್ಕ, ಎನ್. ಹರೀಶ್ ನಾಯಕ್,ನವೀನ್ ಪೆರಿಯಡ್ಕ, ಕಾರ್ತಿಕ್ ಪೆರಿಯಡ್ಕ, ಲಕ್ಷ್ಮಣ ಗೌಡ ನೆಡ್ಚಿಲ್, ಕೇಶವ ರಂಗಾಜೆ, ಹರಿಪ್ರಸಾದ್ ಶೆಟ್ಟಿ, ಧರ್ನಪ್ಪ ನಾಯ್ಕ, ಶೇಖರ ಗೌಡ ಪಂಚೇರು, ಕೃಷ್ಣಪ್ಪ ಗೌಡ ಬೊಳ್ಳಾವು, ಹರೀಶ್ ಪಟ್ಲ, ಜಯಗೋವಿಂದ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ಹಿರೇಬಂಡಾಡಿಯಲ್ಲಿ ಬಿಜೆಪಿ ಪ್ರತಿಭಟನೆ


ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಹಿರೇಬಂಡಾಡಿ ಗ್ರಾ.ಪಂ. ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಗ್ರಾಮಾಂತರ ಮಂಡಲದ ಬಿಜೆಪಿ ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಮಾತನಾಡಿ, ರಾಜ್ಯ ಸರಕಾರದ ವೈಫಲ್ಯಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಶಾಂಭವಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ದಯಾನಂದ ಸರೋಳಿ, ಬಿಜೆಪಿ ಹಿರೇಬಂಡಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ನಿತಿನ್ ತಾರಿತ್ತಡಿ, ಬಿಜೆಪಿ ಮುಖಂಡರಾದ ಹಮ್ಮಬ್ಬ ಶೌಕತ್ ಅಲಿ, ಹೇಮಾವತಿ, ನಾರಾಯಣ, ಹೇಮಂತ್ ಮೈತಳಿಕೆ, ವಿಶ್ವನಾಥ ಕೆಮ್ಮಟೆ, ನವೀನ್ ಕುಬಲ, ನೀಲಯ್ಯ ಸರೋಳಿ, ಆದಿರಾಜ ಶಾಂತಿತ್ತಡ್ಡ, ಜನಾರ್ದನ ಕನ್ಯಾನ, ಚಂದ್ರಶೇಖರ ಕುಲಮಗೇರು, ಜನಾರ್ದನ ಅನತಿಮಾರು, ಧನಂಜಯ ಮುಡಿಪು, ರವೀಂದ್ರ ರೈ ಮುರದಮೇಲು, ರಂಜಿತ್ ಕೆಮಾರಗುತ್ತು, ಲಕ್ಷ್ಮೀಶ ನಿಡ್ಡೆಂಕಿ ಮತ್ತಿತರರು ಉಪಸ್ಥಿತರಿದ್ದರು.

ಪೆರ್ನೆಯಲ್ಲಿ ಬಿಜೆಪಿ ಪ್ರತಿಭಟನೆ


ಉಪ್ಪಿನಂಗಡಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪೆರ್ನೆ ಗ್ರಾ.ಪಂ. ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಗ್ರಾ.ಪಂ. ಕಾರ್ಯದರ್ಶಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಾ.ಪಂ. ಮಾಜಿ ಸದಸ್ಯ ಮುಕುಂದ ಗೌಡ, ಗ್ರಾ.ಪಂ. ಸದಸ್ಯರಾದ ನವೀನ್ ಕುಮಾರ್ ಪದಬರಿ, ಕೇಶವ ಪೂಜಾರಿ ಸುಣ್ಣಾನ, ಪ್ರಕಾಶ ನಾಯಕ್, ಮುತ್ತಪ್ಪ, ಶಾರದ, ಸುಮತಿ ಪ್ರಮುಖರಾದ ಶಿವಪ್ಪ ನಾಯ್ಕ, ಗಂಗಾಧರ ರೈ, ಸುರೇಶ ಕುಲಾಲ್ ಕೋಡಿ, ವಸಂತ ಶೆಟ್ಟಿ, ಹರ್ಷತ್ ಮರ್ದೆಲ್ ಮತ್ತಿತರರು ಉಪಸ್ಥಿತರಿದ್ದರು.

ಇಳಂತಿಲದಲ್ಲಿ ಬಿಜೆಪಿ ಪ್ರತಿಭಟನೆ


ಉಪ್ಪಿನಂಗಡಿ : ರಾಜ್ಯ ಕಾಂಗ್ರೆಸ್ ಸರಕಾರದ ಭೃಷ್ಠಾಚಾರ , ತುಷ್ಠೀಕರಣ ನೀತಿ, ಸಹಿತ ಜನವಿರೋಧಿ ಆಡಳಿತವನ್ನು ವಿರೋಧಿಸಿ ಇಳಂತಿಲ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನಾಕಾರನ್ನು ಉದ್ದೇಶಿಸಿ ಪ್ರಮುಖರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ ಸ್ವ ಪಕ್ಷೀಯರೇ ಕಾಂಗ್ರೇಸ್ ಸರಕಾರದ ಭೃಷ್ಠಾಚಾರವನ್ನು ಬಯಲಿಗೆಳೆಯುತ್ತಿದ್ದರೂ ಸರಕಾರ ಲಜ್ಜೆಗೆಟ್ಟಂತೆ ವರ್ತಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ರಾಘವ ನಾಯ್ಕ್, ಪೆಲಪ್ಪಾರು ವೆಂಕಟರಮಣ ಭಟ್, ಪುರಂದರ, ರಮೇಶ್ ಶ್ರೀ ದುರ್ಗಾ, ಕರುಣಾಕರ , ಮೋಹನ್ ಶೆಟ್ಟಿ, ವಸಂತ ಪಂಚವಟಿ, ಪ್ರವೀಣ್, ಶಶಿ ನಾರಾಯಣ ಭಟ್, ಪ್ರೀತಂ ಮತ್ತಿತರರು ಭಾಗವಹಿಸಿದ್ದರು.

34 ನೆಕ್ಕಿಲಾಡಿಯಲ್ಲಿ ಬಿಜೆಪಿ ಪ್ರತಿಭಟನೆ


ಉಪ್ಪಿನಂಗಡಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ 34 ನೆಕ್ಕಿಲಾಡಿ ಗ್ರಾ.ಪಂ. ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಗ್ರಾ.ಪಂ. ಪಿಡಿಒ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಗ್ರಾ.ಪಂ. ಸದಸ್ಯ ಪ್ರಶಾಂತ್ ನೆಕ್ಕಿಲಾಡಿ ಮಾತನಾಡಿ, ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್, ಉಪಾಧ್ಯಕ್ಷ ಹರೀಶ್ ನಾಯ್ಕ, ಬಿಜೆಪಿ ಪ್ರಮುಖರಾದ ರಾಜೇಶ್ ಶಾಂತಿನಗರ, ಹರೀಶ ಕೆ., ಸ್ವಪ್ನ, ವಿಜಯಕುಮಾರ್, ಗುರುರಾಜ ಭಟ್, ಗೀತಾ, ಶಿವಾನಂದ ಕಜೆ, ಗಣೇಶ ನಾಯಕ್ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News