×
Ad

ಕಲುಷಿತ ಆಹಾರ ಸೇವನೆಯಿಂದ ಜಾನುವಾರುಗಳ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ

Update: 2025-06-23 22:31 IST

ಮಂಗಳೂರು : ನೀರುಮಾರ್ಗ ಸಮೀಪದ ಕೆಲರಾಯಿಯ ಹೈನುಗಾರರೊಬ್ಬರ ಎರಡು ದನ ಮತ್ತು ನಾಲ್ಕು ಎತ್ತು ಅನುಮಾನಾಸ್ಪದವಾಗಿ ಸಾವಿಗೀಡಾಗಲು ಕಲುಷಿತ ಆಹಾರ (ಇನ್‌ಫೆಕ್ಟೆಡ್ ಫುಡ್) ಸೇವನೆಯೇ ಕಾರಣವಾಗಿದೆ. ಯಾವುದೋ ವಿಷ ಪ್ರಾಶನದಿಂದ ಈ ಜಾನುವಾರುಗಳು ಸತ್ತಿಲ್ಲ ಎಂಬುದಾಗಿ ಪೋಸ್ಟ್ ಮಾರ್ಟಂ ವರದಿಯಲ್ಲಿ ದೃಢಪಟ್ಟಿದೆ.

ಕೆಲರಾಯಿಯ ಹೈನುಗಾರ ಜೋಸೆಫ್ ಸ್ಟ್ಯಾನಿ ಪ್ರಕಾಶ್‌ರ ಬಳಿ 30ಕ್ಕೂ ಅಧಿಕ ಹಸು ಮತ್ತು ಎತ್ತುಗಳಿದ್ದವು. ಅದರಲ್ಲಿ 2 ಗಬ್ಬದ ದನಗಳು ಹಾಗೂ 4 ಎತ್ತುಗಳು ಜೂ.13ರಿಂದ 16ರ ಅವಧಿಯಲ್ಲಿ ಸಾವಿಗೀಡಾಗಿದ್ದವು. ಮೇಯಲು ಬಿಟ್ಟ ದನಗಳಿಗೆ ಯಾರೋ ವಿಷವುಣಿಸಿ ಸಾಯಿಸಿರುವ ಶಂಕೆ ವ್ಯಕ್ತಪಡಿಸಿ ಅವರು ಗ್ರಾಮಾಂ ತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಈ ನಡುವೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮೃತ ಜಾನುವಾರುಗಳ ಪೋಸ್ಟ್ ಮಾರ್ಟಂ ಮಾಡಿದಾಗ ವಿಷ ಪ್ರಾಶನದಿಂದ ಸತ್ತಿಲ್ಲ ಎನ್ನುವುದು ದೃಢಪಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಜಾನುವಾರುಗಳು ಕಲುಷಿತ ಆಹಾರ ಸೇವನೆ ಮಾಡಿ ಸಾವಿಗೀಡಾಗಿವೆ. ಯಾವುದೇ ವಿಷದ ಅಂಶ ಪೋಸ್ಟ್ ಮಾರ್ಟಂನಲ್ಲಿ ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News