ವಂಚನೆ ಆರೋಪ: ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು
Update: 2025-06-23 22:39 IST
ಮಂಗಳೂರು, ಜೂ.23: ಷೇರು ಮಾರುಕಟ್ಟೆಯಲ್ಲಿ ಸ್ಟಾಕ್ ಖರೀದಿಸಿ ಮಾರಾಟ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸಿ 46,50,022 ರೂ.ವನ್ನು ಆನ್‌ಲೈನ್ ಮೂಲಕ ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲಿ ಮೇ ಫೀಲ್ಡ್ ಟ್ರೇಡಿಂಗ್ ಎನ್ನುವ ಗ್ರೂಪ್‌ಗೆ ಯಾರೋ ಅಪರಿಚಿತರು ತನ್ನನ್ನು ಸೇರಿಸಿ ಷೇರು ಮಾರುಕಟ್ಟೆಯಲ್ಲಿ ಸ್ಟಾಕ್ ಖರೀದಿಸಿ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂದು ನಂಬಿಸಿದ್ದಾರೆ. ಟ್ರೇಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ತಾನು ಅಪರಿಚಿತರು ತಿಳಿಸಿದಂತೆ ಹಂತ ಹಂತವಾಗಿ 46,50,022 ರೂ.ಹೂಡಿಕೆ ಮಾಡಿದ್ದೆ. ಬಳಿಕ ಆ ಹಣವನ್ನು ಹಿಂಪಡೆಯಲು ಮುಂದಾದಾಗ ಆಗಲಿಲ್ಲ. ಆವಾಗ ಅಪರಿಚಿತ ಟಾಮ್ ಹ್ಯಾರಿಸ್ ಬಳಿ ಕೇಳಿದಾಗ ಹಿಂಪಡೆಯಲು ಟ್ಯಾಕ್ಸ್ ಕಟ್ಟಬೇಕು ಎಂದು ಆತ ತಿಳಿಸಿದ. ಆವಾಗ ತಾನು ಮೋಸ ಹೋಗಿರುವುದಾಗಿ ಆರೋಪಿ ಹಣಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.