ಮಹಿಳೆ ನಾಪತ್ತೆ
Update: 2025-06-26 18:59 IST
ಮಂಗಳೂರು, ಜೂ.26: ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಶರಣಮ್ಮ (27) ಎಂಬಾಕೆ ಜೂ.24ರಂದು ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ಶರಣಮ್ಮರ ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿ 8 ವರ್ಷವಾಗಿದೆ. ಜೂ.24ರಂದು ಶರಣಮ್ಮರ ಪತಿ ಕೆಲಸಕ್ಕೆ ರಜೆ ಹಾಕಿದ್ದು, ಸಂಜೆ ಹಾಲು ತರಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಶರಣಮ್ಮ ಕಾಣೆಯಾಗಿದ್ದು, ರಾತ್ರಿಯಾದರೂ ಮರಳಿ ಬಾರದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ.
5 ಅಡಿ ಎತ್ತರದ, ಕಪ್ಪು ಮೈಬಣ್ಣದ, ಕನ್ನಡ ಮತ್ತು ಹಿಂದಿ ಮಾತನಾಡುವ ಈಕೆ ಮನೆಯಿಂದ ಹೊರಟು ಹೋಗುವಾಗ ನೀಲಿ ಬಣ್ಣದ ಸೀರೆ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈಕೆಯನ್ನು ಕಂಡವರು ಠಾಣೆಯ ದೂ.ಸಂ: 0824-2220518ಕ್ಕೆ ಮಾಹಿತಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.