ಕೊಡಾಜೆ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ
ಬಂಟ್ವಾಳ : ಮಾಣಿ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸ ಕೊಡಾಜೆ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು.
ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು, ಮಸೀದಿ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ.ಜಿಲ್ಲಾ ಮದ್ರಸ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ ಧ್ವಜಾರೋಹಣ ನೆರವೇರಿಸಿದರು.
ಮದ್ರಸ ಮುಖ್ಯ ಶಿಕ್ಷಕ ಶಿಹಾಬುಧ್ಧೀನ್ ಫೈಝಿ ಸಮಸ್ತ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು.
ಮದ್ರಸ ಶಿಕ್ಷಕರಾದ ಅಶ್ರಫ್ ಯಮಾನಿ, ರಶೀದ್ ಅಝ್ಹರಿ, ಎಸ್ಕೆಎಸ್ಬಿವಿ ಅದ್ಯಕ್ಷ ಹಾಝಿಂ ಪಾಟ್ರಕೋಡಿ, ಎಸ್ಕೆಎಸ್ಸೆಸ್ಸೆಫ್ ಕೊಡಾಜೆ - ನೇರಳಕಟ್ಟೆ ಯುನಿಟ್ ಅಧ್ಯಕ್ಷ ಹನೀಫ್ ಅನಂತಾಡಿ, ಕಾರ್ಯದರ್ಶಿ ಅಝೀಝ್ ನೇರಳಕಟ್ಟೆ, ಪ್ರಮುಖರಾದ ಇಸಾಕ್ ನರ್ಸರಿ, ಸಲೀಂ ಬುಡೋಳಿ, ಆಸಿಫ್ ನೇರಳಕಟ್ಟೆ, ಇಸ್ಮಾಯಿಲ್ ನೆಡ್ಯಾಲು, ಸಮ್ಮಾಸ್ ನೇರಳಕಟ್ಟೆ, ಮಸೂದ್ ಹಾಜಿ ಕೊಡಾಜೆ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಮಕ್ಬೂಲ್ ಫೈಝಿ ಸ್ವಾಗತಿಸಿ, ಇಬ್ರಾಹಿಂ ಬಾತಿಷಾ ಇರ್ಫಾನಿ ವಂದಿಸಿದರು.