ಸಮಸ್ತದೊಂದಿಗೆ ಕೈ ಜೋಡಿಸಿ: ಮೌಲನಾ ಇಬ್ರಾಹಿಂ ದಾರಿಮಿ
ಪಡುಬಿದ್ರಿ: ಇಸ್ಲಾಮಿನ ಸಂದೇಶ, ತತ್ವಾದರ್ಶಗಳನ್ನು ವಿವಿಧ ಮಜಲುಗಳಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಮಸ್ತದೊಂದಿಗೆ ಪ್ರತಿಯೊಬ್ಬ ಮುಸಲ್ಮಾನನು ಕೈಜೋಡಿಸಿ ಮುಸ್ಲಿಂ ಸಮುದಾಯ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಮೂಲಕ ಇಹ ಪರ ವಿಜಯಿಗಳಾಗೋಣ ಎಂದು ಇನ್ನಾ-ಪಲಿಮಾರು ಜುಮಾ ಮಸೀದಿಯ ಖತೀಬ್ ಮೌಲಾನ ಇಬ್ರಾಹಿಂ ದಾರಿಮಿ ಹೇಳಿದ್ದಾರೆ.
ಅವರು ಗುರುವಾರ ಇನ್ನಾ-ಪಲಿಮಾರು ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಮ್ ಮದ್ರಸ ವಠಾರದಲ್ಲಿ ನಡೆದ ಸಮಸ್ತ 100 ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎಂ. ಪಿ. ಮೊಯಿದಿನಬ್ಬ, ಉಡುಪಿ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಖಜಾಂಚಿ ಎಂ. ಪಿ. ಶೇಖಬ್ಬ, ಮದ್ರಸದ ಮುಖ್ಯಯೊಪಾಧ್ಯಾಯ ಅಬೂಬಕ್ಕರ್ ಸಿದ್ದೀಖ್ ಫೈಝಿ, ಅಧ್ಯಾಪಕ ಉಸ್ಮಾನ್ ಮೌಲವಿ, ಜಮಾತ್ ಕಾರ್ಯದರ್ಶಿ ಅಬ್ದುಲ್ ರಹೀಮ್, ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಪೀರ್, ಎಸ್‍ಕೆಎಸ್‍ಬಿವಿ ಕಾರ್ಯದರ್ಶಿ ತಸ್ಲೇಮಾ, ಮದ್ರಸ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಅನಿವಾಸಿ ಭಾರತೀಯ ಅಬ್ದುಲ್ ಮುತಲಿಬ್ ಮೊದಲಾದವರು ಉಪಸ್ಥಿತರಿದ್ದರು.