ಯುವಕ ನಾಪತ್ತೆ
Update: 2025-06-26 20:49 IST
ಮಂಗಳೂರು, ಜೂ.26: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಪೋಸ್ಟ್ ಆಫೀಸ್ ರಸ್ತೆಯ ಗ್ಯಾಸ್ ಗೋಡೌನ್ ಬಳಿ ವಾಸವಿದ್ದ ಸಚಿನ್ (21) ನಾಪತ್ತೆಯಾಗಿದ್ದಾರೆ.
ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಸಚಿನ್ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಕೆಲಸಕ್ಕೆ ಹೋಗದಿದ್ದರೆ ಮನೆಗೆ ಬರುವುದು ಬೇಡ ತಾಯಿ ಬೈದದ್ದಕ್ಕೆ ಜಗಳ ಮಾಡಿ ಮೊಬೈಲ್ ಫೋನನ್ನು ಸ್ನೇಹಿತ ನಲ್ಲಿ ನೀಡಿ ಜೂ.2ರಂದು ಮನೆ ಬಿಟ್ಟು ಹೋಗಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.7 ಅಡಿ ಎತ್ತರದ, ಕಪ್ಪು ಮೈ ಬಣ್ಣದ, ಸಾಧಾರಣ ಶರೀರದ ಈತ ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ. ಮನೆಯಿಂದ ತೆರಳುವಾಗ ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಈತನ ಬಗ್ಗೆ ಮಾಹಿತಿಯಿದ್ದಲ್ಲಿ ಸುರತ್ಕಲ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.