ಮೀಫ್ ಕೇಂದ್ರ ವಲಯದಿಂದ ಮೊಂಟೆಸ್ಸರಿ ಶಿಕ್ಷಕರಿಗೆ ಕಾರ್ಯಾಗಾರ
ಮಂಗಳೂರು, ಜೂ.27: ಮೀಫ್ ಕೇಂದ್ರ ವಲಯ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆಗಳ ಮೊಂಟೆಸ್ಸರಿ ವಿಭಾಗದ ಶಿಕ್ಷಕರುಗಳಿಗೆ ನಗರದ ಹಿಸ್‌ಗ್ರೇಸ್ ಮೊಂಟೆಸ್ಸರಿ ಹೌಸ್ ಆಫ್ ಚಿಲ್ಡ್ರನ್ - ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಹ್ಯಾಟ್‌ಹಿಲ್ ಇದರ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬಿಪಿಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ರಾಜ್ಯಸಭಾ ಸದಸ್ಯ ಹಾಜಿ ಬಿ. ಇಬ್ರಾಹಿಮ್ ಉದ್ಘಾಟಿಸಿದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚೈಲ್ಡ್ ಸೈಕೊಲೊಜಿಸ್ಟ್ ರೀತಿ ಆರ್. ಭಾಗವಹಿಸಿದ್ದರು.
ಮೊಂಟೆಸ್ಸರಿ ತರಬೇತುದಾರರಾದ ಮುನೀರಾ ಅಖ್ತರ್ ಬೆಂಗಳೂರು, ಕುಂದಾಪುರದ ಮಾತಾ ಮೊಂಟೆಸ್ಸರಿ ಸಂಸ್ಥೆಯ ಭಾರತಿ ಪ್ರಕಾಶ್ ಶೆಟ್ಟಿ ಹಿಸ್‌ಗ್ರೇಸ್ ಹೌಸ್ ಆಫ್ ಚಿಲ್ಡ್ರನ್ -ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಹ್ಯಾಟ್‌ಹಿಲ್‌ನ ಪ್ರಾಂಶುಪಾಲೆ ಖತೀಜತುಲ್ ಕುಬ್ರಾ, ಕ್ರಿಸ್ಟಿನ್ ಖಾನ್, ಪಿ. ಶರ್ಮಿಳಾ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮೀಫ್ ಉಪಾಧ್ಯಕ್ಷ ಫರ್ವೆಝ್ ಅಲಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ, ಕಾರ್ಯದರ್ಶಿಗಳಾದ ಅನ್ವರ್ ಹುಸೈನ್, ಬಿ.ಎ. ಇಕ್ಬಾಲ್, ಕನ್ವೀನರ್ ಎಂ.ಎ. ಹನೀಫ್ ಉಪಸ್ಥಿತರಿದ್ದರು.
ಬಿಪಿಎಸ್ ಮೊಂಟೆಸ್ಸರಿ ಪುಟಾಣಿಗಳಿಂದ ಪ್ರಾರ್ಥನೆ ಹಾಗೂ ಪ್ರಾಥಮಿಕ ವಿದ್ಯಾರ್ಥಿಗಳಿಂದ ಸಮೂಹ ಗೀತೆ ನಡೆಯಿತು. ಬಿಪಿಎಸ್ ಹ್ಯಾಟ್‌ಹಿಲ್‌ನ ಶಿಕ್ಷಕಿ ಮಿಸ್ ಶೈಮಾ ತರಬೇತುದಾರರನ್ನು ಪರಿಚಯಿಸಿ ದರು. ಶಝ್ಮಾ ಸ್ವಾಗತಿಸಿದರು. ಕವಿತಾ ರಾವ್ ವಂದಿಸಿದರು. ರಿಫಾ ಕಾರ್ಯಕ್ರಮ ನಿರೂಪಿಸಿದರು.
ಬ್ಯಾರೀಸ್ ಸಮೂಹ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ 36 ವಿದ್ಯಾಸಂಸ್ಥೆಗಳ 140 ಶಿಕ್ಷಕಿಯರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.