×
Ad

ಕೊಂಕಣಿಯಲ್ಲಿ ಡಿಜಿಟಲ್ ಕಾರ್ಪಸ್ ಯೋಜನೆ

Update: 2025-06-30 19:04 IST

ಮಂಗಳೂರು, ಜೂ.30: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೇಖನ ಸಂಗ್ರಹ ಡಿಜಿಟಲ್ ಕಾರ್ಪಸ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ತಿಳಿಸಿದ್ಧಾರೆ.

ಕೊಂಕಣಿ ಭಾಷಾ ಕಾರ್ಪಸ್ ಬಗ್ಗೆ ನಡೆದ ಕಾರ್ಯಕರ್ತರ ಪ್ರಥಮ ತರಬೇತಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಯೋಜನೆಯು ಸುಮಾರು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಗೋವಾದಲ್ಲಿ ಪೊರ್ಚು ಗಲ್ ಆಡಳಿತ ಪ್ರಾರಂಭಗೊಳ್ಳುವ ಮೊದಲೇ ದಕ್ಷಿಣದ ಕಡೆಗೆ ವಲಸೆ ಬಂದವರ ಆಡು ಭಾಷೆಯಾಗಿದ್ದ ಕೊಂಕಣಿಯು ಉಳಿದಿದ್ದು, ಕಳೆದ ಐದಾರು ಶತಮಾನಗಳಲ್ಲಿ ಭಾಷಾ ಶಾಸ್ತ್ರೀಯವಾಗಿ ದಾಖಲಿಸಲ್ಪಡದೆ ನಷ್ಟವಾಗುತ್ತಾ ಇದೆ. ಮತ್ತು ಈ ಕಾರಣದಿಂದಾಗಿಯೇ ಇಲ್ಲಿನ ಕೊಂಕಣಿ ಜನರು ಗೋವಾದ ಪ್ರಮಾಣಬದ್ದ ಕೊಂಕಣಿಯಿಂದ ದೂರ ಉಳಿಯುವಂತಾಗಿದೆ ಎಂದು ಸಿಎ ನಂದಗೋಪಾಲ ಶೆಣೈ ಹೇಳಿದ್ದಾರೆ.

ಈ ಬಗ್ಗೆ ವಿವರಣೆ ನೀಡಿದ ಡಾ.ಬಿ.ದೇವದಾಸ ಪೈ ಡಿಜಿಟಲ್ ಕಾರ್ಪಸ್ ಆಧುನಿಕ ಕೃತಕ ಬುದ್ಧಿಮತ್ತೆಯ ಅನ್ವಯಕ್ಕೆ ಹೇಗೆ ಮತ್ತು ಎಷ್ಟು ಅಗತ್ಯವೆಂಬ ವಿಚಾರಗಳ ಬಗ್ಗೆಯೂ ವಿಸ್ತ್ರತ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News