ಕೋಟೆಕಾರು: ಕೇರಳ ಬಸ್ - ಕಾರು ನಡುವೆ ಅಪಘಾತ
Update: 2025-06-30 22:22 IST
ಉಳ್ಳಾಲ: ಕೇರಳ ಸರಕಾರಿ ಸಾರಿಗೆ ಬಸ್ಸೊಂದು ಬ್ರೇಕ್ ಹೊಡೆದ ಪರಿಣಾಮ ಹಿಂದಿನಿಂದ ವೇಗದಲ್ಲಿ ಬಂದ ಕಾರು ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದ ಘಟನೆ ಕೋಟೆಕಾರು ಬೀರಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾಸರಗೋಡಿನಿಂದ ಮಂಗಳೂರಿಗೆ ಸಾಗುತ್ತಿದ್ದ ಕೇರಳ ಸರಕಾರಿ ಸಾರಿಗೆ ಬಸ್ ಬೀರಿ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಇಳಿಸಲು ಬ್ರೇಕ್ ಹೊಡೆದಿದೆ. ಈ ವೇಳೆ ಕಾರು ಬಸ್ಸಿನ ಹಿಂಬಂದಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಸ್ಸಿನ ಹಿಂಬಂದಿ ನಜ್ಜು ಗುಜ್ಜಾಗಿದ್ದಲ್ಲದೆ, ಕಾರಿನ ಮುಂಭಾಗವು ನಜ್ಜುಗುಜ್ಜಾಗಿದೆ. ಕಾರು ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯಿಂದ ಬೀರಿ ಜಂಕ್ಷನ್ ನ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯಗೊಂಡಿತು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.