ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕುಟುಂಬಕ್ಕೆ ಚೆಕ್ ಹಸ್ತಾಂತರ
Update: 2025-07-02 20:44 IST
ಮಂಗಳೂರು: ಬೆಂಗಳೂರಿನ ಮರ್ಕಝ್ ದಾರುಲ್ ಖಝಾ ವತಿಯಿಂದ ಕುದ್ರೋಳಿಯ ಜಾಮಿಯಾ ಮಸೀದಿಯ ಖಾಜಿ ಶೈಖುನಾ ಮುತಹರ್ ಹುಸೇನ್ ಹಾಗೂ ಜಾಮಿಯಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ಸಮ್ಮುಖ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್‌ರ ತಂದೆ ಅಬ್ದುಲ್ ಖಾದರ್‌ಗೆ 50,000 ರೂ. ಮೊತ್ತದ ಚೆಕ್ಕನ್ನು ಮಂಗಳವಾರ ಹತ್ತಾಂತರಿಸಲಾಯಿತು.
ಮರ್ಕಝ್‌ನ ದಾರುಲ್ ಖಝಾದ ಅಧ್ಯಕ್ಷ ಸಗೀರ್ ಸಾಹೇಬ್ ರಶಾದಿಯ ನಿರ್ದೇಶನದಂತೆ ನಡೆದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್.ಎ. ಖಲೀಲ್ ಅಹ್ಮದ್, ಉಪಾಧ್ಯಕ್ಷ ಹಾಜಿ ಮಕ್ಬೂಲ್ ಅಹ್ಮದ್, ಸದಸ್ಯರಾದ ಡಾ.ಮುಹಮ್ಮದ್ ಆರಿಫ್ ಮಸೂದ್, ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಜಾಮಿಯಾ ಮಸೀದಿಯ ಜೊತೆ ಕಾರ್ಯದರ್ಶಿ ಆಸಿಫ್ ಸರ್ಫುದ್ದೀನ್ ಉಪಸ್ಥಿತರಿದ್ದರು.