ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ
ಕೊಣಾಜೆ: ಸಮಾಜದಲ್ಲಿ ವೈದ್ಯರ ಪಾತ್ರ ಪ್ರಮುಖವಾದುದು. ಯೆನೆಪೋಯ ಆಸ್ಪತ್ರೆಯಲ್ಲಿ ಕಳೆದ ವರ್ಷ 15,000 ಕ್ಕೂ ಹೆಚ್ಚು ರೋಗಿಗಳಿಗೆ, ವಿವಿಧ ಸರ್ಕಾರ ಮತ್ತು ಅರೆಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ, ಆಸ್ಪತ್ರೆಯಲ್ಲಿ ತಂತ್ರಜ್ಞಾನಪೂರ್ಣ, ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಸುವುದರ ಹಿಂದಿನ ಶಕ್ತಿ ನಮ್ಮ ವೈದ್ಯರೇ ಆಗಿದ್ದಾರೆ ಎಂದು ಎಂದು ಯೆನೆಪೋಯಾ ವಿಶ್ವವಿದ್ಯಾನಿಲಯದ ಸಹಾಯಕ ವೈದ್ಯಕೀಯ ಅಧ್ಯಕ್ಷರು ಡಾ.ನಾಗರಾಜ ಶೆಟ್ ಹೇಳಿದರು.
ಅವರು ಮಂಗಳವಾರ ನಗರದ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ರಾಷ್ಟೀಯ ವೈದ್ಯರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ, ವೈದ್ಯ ವೃತ್ತಿಯಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯ,ಸಂತೋಷ ಮತ್ತು ತೃಪ್ತಿದಾಯಕವಾಗಿ ರೋಗಿಗಳ ಸೇವೆ ಮಾಡಿ ಎಂದು ಉತ್ತೇಜಿಸಿದರು
ಯೆನೆಪೋಯಾ ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ಎಂ.ಎಸ್. ಮೂಸಬ್ಬ, ಮಾತನಾಡಿ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಕಾರಣರಾಗಿರುವ ಡಾ. ಬಿಧಾನ್ ಚಂದ್ರ ರಾಯ್ ಅವರ ವೃತ್ತಿ ಸೇವೆಯನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯೆನೆಪೋಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧ್ಯಕ್ಷರು ಡಾ. ಹಬೀಬ್ ರಹ್ಮಾನ್ ಎ.ಎ ಅಧ್ಯಕ್ಷೀಯ ಭಾಷಣ ಮಾಡಿ ವೈದ್ಯರನ್ನು ಬಹುತೇಕ ಜನರು ದೇವರಂತೆ ನೋಡುತ್ತಾರೆ,ಆದರೆ ಅವರು ಸಹ ಮಾನವರೆಂಬ ವಿಷಯವನ್ನು ಮರೆಯಬಾರದು ಎಂದರು.
"ಸಹಾನುಭೂತಿಯೊಂದಿಗೆ ಸೇವೆ: ಪ್ರಾಪ್ಯವಾದ ಆರೋಗ್ಯ ಸೇವೆಗಳು ವೈದ್ಯರ ಉದ್ಯೋಗ ತೃಪ್ತಿಗೆ ಹೇಗೆ ಪ್ರಭಾವ ಬೀರುತ್ತವೆ" ಎಂಬ ವಿಷಯದ ಮೇಲೆ ಆಯೋಜಿಸಲಾದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಡಾ. ಚಾಂದ್ನಿ ಎಸ್, ಡಾ. ಉಮಾ ಕುಲಕರ್ಣಿ ಮತ್ತು ಡಾ. ಸೌರಭಾ ಭಟ್ ರನ್ನು ಗೌರವಿಸಲಾಯಿತು ಹಾಗೂ ಡಾ. ಅಬುಸಾಲಿ ಎ.ಪಿ ಮತ್ತು ಡಾ. ಸಿ.ಪಿ. ಅಬ್ದುಲ್ ರಹ್ಮಾನ್ ಅವರನ್ನು ಅವರ ದೀರ್ಘಕಾಲದ ನಿಷ್ಠಾವಂತ ಸೇವೆಗಾಗಿ ಗೌರವಿಸಲಾಯಿತು.
ಡಾ. ಬಿ.ಟಿ. ನಂದೀಶ್, ಡಾ. ಪ್ರಕಾಶ್ ಸಲ್ದಾನ್ಹಾ,ಡಾ. ಮಾಜಿ ಜೋಸ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ನರ್ಸಿಂಗ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ರುಬೈಬ್ ಪ್ರಾರ್ಥಿಸಿ, ನೆಲ್ವಿನ್ ನೆಲ್ಸನ್ ಸ್ವಾಗತಿಸಿ,ಡಾ. ಮುಕ್ತಾರ್ ಅಬ್ದುಲ್ಲಾ, ವಂದಿಸಿದರು.