ರಾಧಿಕಾ ಕೆ.ಜಿ.ಗೆ ಪಿಎಚ್ ಡಿ ಪದವಿ
Update: 2025-07-02 20:57 IST
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ರಾಧಿಕಾ ಅವರು ಮಂಡಿಸಿದ ' ಇಂಡಿಯನ್ ಟ್ರೇಡ್ ಪರ್ಮೋಮೆನ್ಸ್ ಇನ್ ದಿ ಪೋಸ್ಟ್ ರಿಫಾರ್ಮ್ ಪಿರೆಡ್'(Indian trade performance in the post reform period) ಎಂಬ ಮಹಾಪ್ರಬಂಧ ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ( ಪಿಎಚ್ ಡಿ)ಪದವಿ ಪ್ರದಾನ ಮಾಡಿದೆ. ಇವರಿಗೆ ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಜಯವಂತ್ ನಾಯಕ್ ಮಾರ್ಗದರ್ಶನ ನೀಡಿದ್ದರು.
ಕ್ಯಾಂಪ್ಕೋ ದಲ್ಲಿ ಉದ್ಯೋಗಿ ಯಾಗಿದ್ದ ಸುಳ್ಯ ದ ಗೋಪಾಲಕೃಷ್ಣ. ಕೆ ಮತ್ತು ಜಲಜಾಕ್ಷಿ ದಂಪತಿಗಳ ಪುತ್ರಿ ಯಾಗಿದ್ದು, ಪ್ರಸ್ತುತ ಇವರು ಮಂಗಳೂರಿನ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.