×
Ad

ಮಂಗಳೂರು| ಎಸ್‌ವೈಎಸ್ 'ಸೌಹಾರ್ದ ಸಂಚಾರ': ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

Update: 2025-07-03 21:19 IST

ಮಂಗಳೂರು: ಕೋಮು ಸೌಹಾರ್ದವನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು ಹಮ್ಮಿಕೊಂಡಿರುವ 'ಕರಾವಳಿ ನೆಲದಲ್ಲಿ ಸೌಹಾರ್ದ ಸಂಚಾರ' ಕಾರ್ಯಕ್ರಮದ ಸ್ವಾಗತ ಸಮಿತಿ ಕಚೇರಿಯನ್ನು ನಗರದ ಬಾವುಟಗುಡ್ಡೆ ಈದ್ಗಾ ಮಸೀದಿ ಸಮೀಪದ ಸೈನಿಕ ಭವನ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.

ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷರುಗಳಾದ ಸೈಯದ್ ಇಲ್ಯಾಸ್ ತಂಙಳ್ ಮಡಿಕೇರಿ, ಸೈಯದ್ ಹಾಮೀಂ ತಂಙಳ್ ಬಾಳೆಹೊನ್ನೂರು, ಸೈಯದ್ ಶಾಫೀ ನಈಮಿ ತಂಙಳ್ ಸಕಲೇಶಪುರ ಉದ್ಘಾಟಿಸಿದರು.‌

ಜುಲೈ 14, 15, 16 ರಂದು ಕುಂದಾಪುರದಿಂದ ಸುಳ್ಯದ ತನಕ ಸಾಗಲಿರುವ ಸೌಹಾರ್ದ ಸಂಚಾರದಲ್ಲಿ ಎಲ್ಲಾ ಧರ್ಮದವರು ಭಾಗವಹಿಸಲಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 17 ಪ್ರಮುಖ ಪಟ್ಟಣಗಳಲ್ಲಿ ಸೌಹಾರ್ದದ ಸಂದೇಶ ಸಾರಲಿದೆ.

ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದರು. ರಾಜ್ಯ ನಾಯಕರಾದ ಹಸೈನಾರ್ ಆನೆಮಹಲ್, ಮುಹಮ್ಮದ್ ಅಲೀ ಸಖಾಫಿ ಅಶ್ಅರಿಯ್ಯ, ಅಬ್ದುಲ್ ರಹ್ಮಾನ್ ರಝ್ವಿ, ಖಲೀಲ್ ಮಾಲಿಕಿ, ನ್ಯಾಯವಾದಿ ಇಲ್ಯಾಸ್ ನಾವುಂದ, ಮುಸ್ತಫಾ ಕೋಡಪದವು, ಜಿಲ್ಲಾ ನಾಯಕರಾದ ಮಹ್ಬೂಬ್ ಸಖಾಫಿ, ಅಶ್ರಫ್ ಸಖಾಫಿ ಮೂಡಡ್ಕ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸಾಲಿಹ್ ಮುರ, ಶಾಫಿ ಸಖಾಫಿ ಕೊಕ್ಕಡ, ಯಾಕೂಬ್ ಸಅದಿ ನಾವೂರು, ನವಾಝ್ ಸಖಾಫಿ ಅಡ್ಯಾರ್, ಹಸನ್ ಪಾಂಡೇಶ್ವರ, ನಝೀರ್ ವಳವೂರು, ಝೀನತ್ ಭಕ್ಷ್ ಯತೀಂ ಖಾನಾ ಕಾರ್ಯದರ್ಶಿ ರಶೀದ್ ಹಾಜಿ ಪಾಂಡೇಶ್ವರ, ಸಮಾಜ ಸೇವಕರಾದ ಅಶ್ರಫ್ ಕಿನಾರ, ಫಾರೂಕ್ ಜೆಪ್ಪು, ಬಶೀರ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.

ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಕೋಶಾಧಿಕಾರಿ ಮನ್ಸೂರ್ ಕೋಟೆಗದ್ದೆ ಧನ್ಯವಾದ ಸಲ್ಲಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News