ಯುವಕ ನಾಪತ್ತೆ
Update: 2025-07-03 22:18 IST
ಮಂಗಳೂರು,ಜು.3: ನಗರದ ರೋಹನ್ ಎಸ್ಟೇಟ್‌ನಲ್ಲಿ ಕಳೆದ 7 ತಿಂಗಳಿನಿಂದ ಕೆಲಸ ಮಾಡಿಕೊಂಡು ಸೈಟ್‌ನ ಶೆಡ್‌ನಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮುಕೇಶ್ ಮಂಡಲ್ (27) ಎಂಬವರು ಕಾಣೆಯಾಗಿದ್ದಾರೆ.
ರಾತ್ರಿ ವೇಳೆ ಶೆಡ್‌ನ ಹೊರಗಡೆ ಫೋನ್‌ನಲ್ಲಿ ಮಾತನಾಡಿಕೊಂಡಿದ್ದವರು ದಿಢೀರ್ ಕಾಣೆಯಾಗಿದ್ದಾರೆ. 5.7 ಅಡಿ ಎತ್ತರದ, ಎಣ್ಣೆ ಕಪ್ಪುಮೈಬಣ್ಣದ, ದೃಢಕಾಯ ಶರೀರದ ಇವರು ಹಿಂದಿ ಭಾಷೆ ಮಾತನಾಡುತ್ತಾರೆ. ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.