ಅಖಿಲ ಭಾರತ ಬೇಡಿಕೆಯ ದಿನಾಚರಣೆ
ಉಡುಪಿ : ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗದ ವತಿಯಿಂದ ಅಖಿಲ ಭಾರತ ಬೇಡಿಕೆಯ ದಿನವನ್ನು ಅಜ್ಜರಕಾಡು ಎಲ್‌ಐಸಿ ವಿಭಾಗೀಯ ಕಛೇರಿಯ ಎದುರು ಶುಕ್ರವಾರ ಆಚರಿಸಲಾಯಿತು.
ವಿಮಾ ಪಿಂಚಣಿದಾರರ ಈಡೇರದ ಬೇಡಿಕೆಗಳಾದ ಪಿಂಚಣಿಯ ನಿಯತಕಾಲಿಕ ನವೀಕರಣ, 20 ವರ್ಷ ಗಳ ಸೇವೆ ಪೂರ್ಣಗೊಂಡ ನಂತರ ಪೂರ್ಣ ಪಿಂಚಣಿಗೆ ಅರ್ಹತೆ, ಎಲ್ಲಾ ಪಿಂಚಣಿದಾರರಿಗೆ ಮಾಸಿಕ ಆಧಾರದ ಮೇಲೆ ಎಕ್ಸ್‌ಗ್ರೇಷಿಯಾ ಪಾವತಿ, 80ವರ್ಷ ತುಂಬಿದ ನಂತರ ಶೇ.20 ಏಕರೂಪದ ದರದಲ್ಲಿ ಹೆಚ್ಚುವರಿ ಪಿಂಚಣಿ/ಕುಟುಂಬ ಪಿಂಚಣಿ, ನಗದು ವೈದ್ಯಕೀಯ ಸೌಲಭ್ಯ ಪಾವತಿ ಮತ್ತು ಮೆಡಿಕ್ಲೈಮ್ ಯೋಜನೆಯಲ್ಲಿ ಸುಧಾರಣೆಗಳು, ಮಾಜಿ ಸೈಕನಿಕರಾಗಿದ್ದು ಎಲ್‌ಐಸಿಯಲ್ಲಿ ನಿವೃತ್ತರಾದ ನೌಕರರುಗಳಿಗೆ ಪಿಂಚಣಿಯನ್ನು ಆಯ್ಕೆ ಮಾಡಿಕೊಳ್ಳಲು ಪುನರ್ ಅವಕಾಶ ಮತ್ತು ಆಗಸ್ಟ್ 1997ರ ಪೂರ್ವದ ಪಿಂಚಣಿ ದಾರರಿಗೆ ಏಕರೂಪದ ತುಟ್ಟಿಭತ್ಯೆ ತಟಸ್ಥೀಕರಣ ಈಡೇರಿಕೆಯನ್ನು ಪರಿಗಣಿಸುವಂತೆ ಎಲ್ಲೈಸಿ ಆಡಳಿತ ಮಂಡಳಿಯನ್ನು ಒತಾತಿಯಿಸುವ ಕರಡು ನಿರ್ಣಯವನ್ನು ಸಭೆಯಲ್ಲಿ ಮಂಡಿಸ ಲಾಯಿತು.
ವಿಮಾ ನೌಕರರ ಸಂಘ ಉಡುಪಿ ವಿಭಾಗದ ಉಪಾಧ್ಯಕ್ಷ ಡೆರಿಕ್ ರೆಬೆಲ್ಲೋ, ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ, ಸಂಘಟನೆಯ ಅಧ್ಯಕ್ಷ ಎ.ಮಧ್ವರಾಜ ಬಲ್ಲಾಳ, ಕಾರ್ಯದರ್ಶಿ ವಿಠಲಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.