×
Ad

ಟಾಸ್ಕ್ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು

Update: 2025-07-07 22:42 IST

ಮಂಗಳೂರು, ಜು.7: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ ಹೆಸರಿನಲ್ಲಿ 4.59 ಲಕ್ಷ ರೂ. ವಂಚಿಸಿದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.19ರಂದು ವಾಟ್ಸ್‌ಆ್ಯಪ್ ನೋಡುತ್ತಿದ್ದಾಗ ಎಫ್‌ಎಫ್ 143 ಎನ್ನುವ ಗ್ರೂಪ್‌ಗೆ ತನ್ನನ್ನು ಸೇರ್ಪಡೆ ಗೊಳಿಸಿರುವುದು ಕಂಡು ಬಂದಿದೆ. ಗೂಪ್‌ನಲ್ಲಿ ಕಳುಹಿಸಿದ್ದ ಲಿಂಕ್‌ನಲ್ಲಿರುವ ವೀಡಿಯೋ ಲೈಕ್ ಮಾಡಿ ಪೇಜ್ ಸಬ್‌ಸ್ಕ್ರ ಬ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ಇನ್ನೊಬ್ಬಾತನ ವಾಟ್ಸ್‌ಆ್ಯಪ್‌ಗೆ ಸೆಂಡ್ ಮಾಡಿದರೆ 150 ರೂ. ನೀಡುವುದಾಗಿ ತಿಳಿಸಲಾಗಿತ್ತು. ಅದರಂತೆ ತಾನು ಸ್ಕ್ರೀನ್ ಶಾಟ್ ಕಳುಹಿಸಿದ್ದು, ಆ ವ್ಯಕ್ತಿ ವೈಯಕ್ತಿಕ ಮಾಹಿತಿಯನ್ನು ಕೂಡ ಪಡೆದನಲ್ಲದೆ ಟೆಲಿಗ್ರಾಂ ಆ್ಯಪ್ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ. ನಂತರ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಇಕಾನಮಿ ಟಾಸ್ಕ್‌ಗಳ ಬಗ್ಗೆ ಲಿಂಕ್ ಕಳುಹಿಸಿಕೊಟ್ಟಿದ್ದು, ಹೆಚ್ಚಿನ ಲಾಭ ದೊರೆಯುವುದಾಗಿ ಆಮಿಷ ಒಡ್ಡಿದ್ದ. ಅದನ್ನು ನಂಬಿದ ತಾನು ಹಂತ ಹಂತವಾಗಿ 4.59 ಲಕ್ಷ ರೂ. ಜಮೆ ಮಾಡಿದ್ದೆ. ಷೇರು ಖಾತೆ ಪರಿಶೀಲಿಸಿದಾಗ 6.85 ಲಕ್ಷ ರೂ. ಒಟ್ಟಾಗಿರುವುದು ಕಂಡು ಬಂದಿದೆ. ಈ ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಅರ್ಧದಷ್ಟು ಮೊತ್ತವನ್ನು ಜಮೆ ಮಾಡಬೇಕು ಎಂದು ಅಪರಿಚಿತ ವ್ಯಕ್ತಿ ತಿಳಿಸಿದಾಗ ತಾನು ಮೋಸ ಹೋಗಿರುವುದು ತಿಳಿಯಿತು ಎಂದು ಹಣ ಕಳಕೊಂಡ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News