×
Ad

ಖತರ್ ಗೆಳೆಯರ ಸಂಗಮ: ಸ್ನೇಹ ಮಿಲನ ಕಾರ್ಯಕ್ರಮ

Update: 2025-07-10 18:08 IST

ಮಂಗಳೂರು: ಖತರ್ ನಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯ ಗಳೆಯರ ತಂಡ ಸ್ನೇಹ ಮಿಲನ ಕಾರ್ಯಕ್ರಮವನ್ನು ಕಲ್ಲಾಪುವಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತ್ತು.

ಮೊಬೈಲ್ ಮದಕ ಹಾಗೂ ಗೋಲ್ಡನ್ ಮಾಡೂರು ಎಂಬ ತಂಡಗಳ ಹೆಸರಿನಲ್ಲಿ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿದ್ದು, ಈ ಪಂದ್ಯಾಕೂಟದಲ್ಲಿ ಮೊಬೈಲ್ ಮದಕ ತಂಡವು ಚಾಂಪಿಯನ್ ಕಿರೀಟವನ್ನು ತಮ್ಮದಾಗಿಸಿತು.

ಪಂದ್ಯಾಕೂಟದ ಸರಣೆ ಶ್ರೇಷ್ಠ ಪಶಸ್ತಿಯನ್ನು ಮೊಬೈಲ್ ತಂಡದ ರಿಯಾಝ್ ಪಾಲಾದರೆ‌, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಮೊಬೈಲ್ ಮದಕ ತಂಡದ ಮುಝಮಿಲ್ ಹಳೆಕೋಟೆ ಹಾಗೂ ಉತ್ತಮ ಎಸೆತಗಾರಿಕೆ ಪ್ರಶಸ್ತಿಯನ್ನು ಮೊಬೈಲ್ ಮದಕ ತಂಡದ ರಹೀಂ ಹಳೆಕೋಟೆ ಮತ್ತು ಗೋಲ್ಡನ್ ಮಾಡೂರು ತಂಡದ ಹಕೀಂ ರವರ ಪಾಲಾಯಿತು.

ಈ ಸಂಧರ್ಭ ಮುಖ್ಯ ಅತಿಥಿಯಾಗಿ ಯುವ ಉದ್ಯಮಿ ಗ್ಯಾಲಕ್ಷಿ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಅವಿನಾಶ್ ಬಂಟ್ಟಾಳ ಹಾಗೂ ಬ್ರದರ್ಸ್ ಇಡ್ಯಾ ಸ್ಪೋಟ್ಸ್ ಕ್ಲಬ್ ಇದರ ಅಧ್ಯಕ್ಷ ಕಲಂದರ್ ಇಡ್ಯ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದೇಶದಲ್ಲಿ ಉದ್ಯೋಗ ಮಾಡುವ ಎಲ್ಲಾ ಗೆಳೆಯರ ಬಳಗವನ್ನು ಅಭಿನಂದಿಸಿ, ಚಾಂಪಿಯನ್ ತಂಡಕ್ಕೆ ಶುಭ ಹಾರೈಸಿದರು.

ಸತ್ತಾರ್ ಖತರ್, ಸಮೀರ್ 7Star, ಸಿದ್ದೀಕ್ ಖತರ್, ಆಸಿಫ್ ಖತರ್, ಜುನೈದ್ ಖತರ್, ಸಲಾಂ ಮಾಡೂರು, ಸಲೀಂ ಮಾಡೂರು, ಸಲೀಂ ಹಳೆಕೋಟೆ, ಇಮ್ರಾನ್ ಚೈನ, ಹಫೀಝ್ ಖತರ್, ಅಲ್ತಾಫ್ ಮತ್ತು ಬಾಶಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News