ಅವರಾಲು ಮಟ್ಟು ಮಸೀದಿಗೆ ಶಿಲಾನ್ಯಾಸ
ಪಡುಬಿದ್ರಿ: ಕನ್ನಂಗಾರ್ ಜಮಾಅತ್‍ಗೆ ಒಳಪಟ್ಟ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲು ಮಟ್ಟುವಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಲ್ ಮಸ್ಜಿದುಲ್ ಮುಹಮ್ಮದಿಯ ಶಿಲಾನ್ಯಾಸ ಗುರುವಾರ ನೆರವೇರಿತು.
ಅಸಯ್ಯಿದ್ ಕೆ.ಎಸ್. ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ದುವಾ ನೆರವೇರಿಸಿ ಶಿಲಾನ್ಯಾಸಗೈದರು. ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ಆಶೀರ್ವಚನ ನೀಡಿದರು. ಕನ್ನಂಗಾರ್ ಜುಮಾ ಮಸ್ಜಿದ್ ಖತೀಬರಾದ ಅಶ್ರಫ್ ಸಖಾಫಿ ಕಿನ್ಯಾ ಪ್ರಸ್ತಾವಿಕವಾಗಿ ಮಾತನಾಡಿದರು.
ಕನ್ನಂಗಾರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಕಾರ್ಯದರ್ಶಿ ಶೇಖ್ ಅಬ್ದುಲ್ಲಾ ಹಾಜಿ ಮಿನಾ, ಕರ್ನಿರೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಆಲಿ, ಮುಸ್ಲಿಮ್ ಮುಖಂಡ ಎಂ.ಪಿ. ಮೊಯಿದಿ ನಬ್ಬ, ಅಬ್ದುಲ್ ಅಝೀಝ್ ಹೆಜಮಾಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೀಝ್ ಹುಸೇನ್, ಕಬೀರ್ ಹಾಜಿ, ಮಟ್ಟು ಮಸೀದಿ ಅಧ್ಯಕ್ಷ ಎಂ.ಎ. ಸಯ್ಯದ್, ಕಾರ್ಯದರ್ಶಿ ನೌಫಾಲ್ ಆಶೀಕ್, ಉಪಾಧ್ಯಕ್ಷ ಸುಲೈಮಾನ್ ಗಫಾರ್, ಕೋಶಾಧಿಕಾರಿ ಎಂ.ಎ. ವಾಝಿಲ್, ಮುಹಮ್ಮದ್ ಮಟ್ಟು, ಮುಹಮ್ಮದ್ ಆಲಿ, ಮಯ್ಯದ್ ಕೊಯ್ಯಾರ್ ಉಪಸ್ಥಿತರಿದ್ದರು.