×
Ad

ಕರ್ನಾಟಕ ಸ್ಟೇಟ್ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್‌ಗೆ ಚಾಲನೆ

Update: 2025-07-10 20:21 IST

ಮಂಗಳೂರು, ಜು.10: ಕರ್ನಾಟಕ ಸ್ಟೇಟ್ ಟೇಬಲ್ ಟೆನಿಸ್ ಆಸೋಸಿಯೆಶನ್ ಮತ್ತು ದ.ಕ. ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಶನ್ ಆಶ್ರಯದಲ್ಲಿ ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡಿತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಚಾಲನೆ ನೀಡಿದರು. ಈ ಪ್ರತಿಷ್ಠಿತ ಪಂದ್ಯಾವಳಿ ಮೂಲಕ ಭವಿಷ್ಯದ ಚಾಂಪಿಯನ್‌ಗಳು ಹೊರಹೊಮ್ಮಲಿ ಎಂದು ಹಾರೈಸಿದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ಫೌಸ್ಟಿನ್ ಲ್ಯೂಕಸ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸ್‌ನ ಮುಖ್ಯ ತರಬೇತುದಾರ ಶಾಲಿನಿ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.

ದ.ಕ. ಟೇಬಲ್ ಟೆನಿಸ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ (ಕೆಟಿಟಿಎ) ಉಪಾಧ್ಯಕ್ಷ ಗೌತಮ್ ಶೆಟ್ಟಿ , ಮುಖ್ಯ ರೆಫರಿ ಟಿ.ಜಿ. ಉಪಾಧ್ಯ, ಕೆಟಿಟಿಎ ಕಾರ್ಯದರ್ಶಿ ಕೆ.ಆರ್. ಮಂಜುನಾಥ, ಉಡುಪಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮತ್ತು ಕೆಟಿಟಿಎ ಉಪಾಧ್ಯಕ್ಷ ಐ.ಕೆ. ಜಯಚಂದ್ರ ಉಪಸ್ಥಿತರಿದ್ದರು.

ಮೊದಲ ದಿನದ ಫಲಿತಾಂಶ:

ಜುಲೈ 13ರ ತನಕ ನಡೆಯಲಿರುವ ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್‌ನ ಮೊದಲ ದಿನದ ಫಲಿತಾಂಶ ಇಂತಿವೆ.

*19 ವರ್ಷದೊಳಗಿನ ಆಟಗಾರರು

ವಿನ್ನರ್: ಅಭಿನವ್ ಕೆ ಮೂರ್ತಿ

ರನ್ನರ್: ಅಥರ್ವ ನವರಂಗ

ಸೆಕೆಂಡ್ ರನ್ನರ್ಸ್‌ : ಅರ್ನವ್ ಎನ್ ಮತ್ತು ವಿಭಾಸ್ ವಿಜಿ

*19 ವರ್ಷದೊಳಗಿನ ಆಟಗಾರ್ತಿಯರು

ವಿನ್ನರ್: ತನಿಷ್ಕಾ ಕಪಿಲ್ ಕಾಲಭೈರವ್

ರನ್ನರ್: ಹಿಮಾಂಶಿ ಚೌಧರಿ

ಸೆಕೆಂಡ್ ರನ್ಸರ್ಸ್‌ : ಹಿಯಾ ಸಿಂಗ್ ಮತ್ತು ನೀತಿ ಅಗರ್ವಾಲ್

*ಮಹಿಳೆಯರು

ವಿನ್ನರ್: ತೃಪ್ತಿ ಪುರೋಹಿತ್

ರನ್ನರ್ : ಕುಶಿ ವಿ

ಸೆಕೆಂಡ್ ರನ್ಸರ್ಸ್‌: ಸುಮಿಯಾ ಕೆಎಸ್ ಭಟ್ ಮತ್ತು ತನಿಷ್ಕಾ ಕಪಿಲ್ ಕಾಲಭೈರವ್





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News