ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್: ಪುರುಷರ ಸಿಂಗಲ್ಸ್‌ನಲ್ಲಿ ಆಕಾಶ್‌ಗೆ ಪ್ರಶಸ್ತಿ
ಮಂಗಳೂರು: ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಆಕಾಶ್ .ಕೆ.ಜೆ ಪ್ರಶಸ್ತಿ ಜಯಿಸಿದ್ದಾರೆ.
ಕರ್ನಾಟಕ ಸ್ಟೇಟ್ ಟೇಬಲ್ ಟೆನಿಸ್ ಆಸೋಸಿಯೆಶನ್ (ಕೆಟಿಟಿಎ) ಮತ್ತು ದ.ಕ. ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಶನ್ (ಡಿಕೆಟಿಟಿಎ) ಆಶ್ರಯದಲ್ಲಿ ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್ ಎರಡನೇ ದಿನವಾಗಿರುವ ಶುಕ್ರವಾರ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಆಕಾಶ್ ಕೆ.ಜೆ ಅವರು ಅನಿರ್ಬಾನ್ ರಾಯ್ ಚೌದರಿ ಅವರನ್ನು 11-7, 11-3, 11-9, 11-3 ಅಂತರದಿಂದ ಸೋಲಿಸಿ ಟ್ರೋಫಿ ಎತ್ತಿದರು.
ಆಕಾಶ್ ಕೆ.ಜೆ. ಸೆಮಿಫೈನಲ್‌ನಲ್ಲಿ ಯಶ್ವಂತ್ ಪಿ ಅವರನ್ನು 11-7, 11-4, 12-10, 10-12, 11-3 ಅಂತರದಲ್ಲಿ ಮಣಿಸಿ ಮತ್ತು ಅನಿರ್ಬಾನ್ ರಾಯ್ ಚೌದರಿ ಅವರು ಶ್ರೀಕಾಂತ್ ಕಶ್ಯಪ್‌ರನ್ನು 11-9, 11-5, 11-7,11-8 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯ ಸುತ್ತು ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್ ಕಶ್ಯಪ್ ಅವರು 11-7, 11-6, 13-1 ರಲ್ಲಿ ವಿಭಾಸ್ ವಿಜಿಯನ್ನು ಸೋಲಿಸಿದರು. ಅನಿರ್ಬನ್ ರಾಯ್‌ಚೌಧರಿ ಅವರು ಅಭಿನವ್ ಕೆ ಮೂರ್ತಿ ಅವರನ್ನು 13-11, 11-6, 9-11, 7-11, 11-6 ಸೆಟ್‌ಗಳಿಂದ , ಆಕಾಶ್ ಕೆಜೆ 12-10, 11-7, 11-4 ರಲ್ಲಿ ಅಥರ್ವ ನವರಂಗರನ್ನು ಮತ್ತು ಯಶವಂತ.ಪಿ ಅವರು ವರುಣ್ ಬಿ ಕಶ್ಯಪ್‌ರನ್ನು 13-11, 6-11, 13-11, 15-1 ರಿಂದ ಸೋಲಿಸಿ ಮುಂದಿನ ಹಂತ ತಲುಪಿದ್ದರು
* ಅಂಡರ್ -17 ಬಾಲಕಿಯರ ಸಿಂಗಲ್ಸ್ : ಫೈನಲ್‌ನಲ್ಲಿ ಹಿಯಾ ಸಿಂಗ್ ಅವರು ತನಿಷ್ಕಾ ಕಪಿಲ್ ಕಾಲಭೈರವ್‌ರನ್ನು 10-12, 11-8, 11-7, 11-4 ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು.
ಸೆಮಿಫೈನಲ್‌ನಲ್ಲಿ ತನಿಷ್ಕಾ ಕಪಿಲ್ ಕಾಲಭೈರವ್ ಅವರು ಹಿಮಾಂಶಿ ಚೌಧರಿ ಅವರನ್ನು 11-8, 11-7, 10-12, 8-11, 11-8 ಮತ್ತು ಹಿಯಾ ಸಿಂಗ್ ಅವರು ಕೈರಾ ಬಾಳಿಗಾರನ್ನು 11-7, 9-11, 11-4, 11-4 ರಿಂದ ಸೋಲಿಸಿ ಅಂತಿಮ ಹಂತ ತಲುಪಿದ್ದರು.
ಅಂಡರ್17 ಬಾಲಕರ ಸಿಂಗಲ್ಸ್ : ವಿಜೇತರು: ಅಥರ್ವ ನವರಂಗ ಫೈನಲ್‌ನಲ್ಲಿ ಅಥರ್ವ ನವರಂಗ ಅವರು ಅರ್ನವ್.ಎನ್ ಅವರನ್ನು 1-11, 11-7, 11-6, 11-5 ಅಂತರದಲ್ಲಿ ಮಣಿಸಿ ಪ್ರಶಸ್ತಿ ಬಾಚಿಕೊಂಡರು.
ಸೆಮಿಫೈನಲ್‌ನಲ್ಲಿ ಅಥರ್ವ ನವರಂಗ ಅವರು ಸಿದ್ದಾಂತ್ ಧರಿವಾಲ್‌ರನ್ನು 11-9, 11-3, 11-5 ರಲ್ಲಿ ಸೋಲಿಸಿ, ಅರ್ನವ್.ಎನ್ ಅವರು ಗೌರವ್ ಗೌಡರನ್ನು 11-5, 11-6, 8-11, 11-9 ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು.
ಶುಕ್ರವಾರ ಟೂರ್ನಮೆಂಟ್‌ನ ಸಮಾರಂಭದಲ್ಲಿ ಸಂತ ತೆರೆಸಾ ಸ್ಕೂಲ್‌ನ ಪ್ರಾಂಶುಪಾಲೆ ಸಿಸ್ಟರ್ ಲೌರ್ಡೆಸ್, ಪಾಂಡೇಶ್ವರ ಪಿಎಸ್‌ಐ ಮಾರುತಿ ಪಿ, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪಿಇಡಿ ಸುಶ್ಮಾ ಕೆ.ಆರ್ ಮತ್ತು ಎನ್‌ಎಂಪಿಎ ಮಾಜಿ ಎಇಇ ಪಿ.ಸಿ.ಚಾಕೊ ಮುಖ್ಯ ಅತಿಥಿಯಾಗಿದ್ದರು.